Chikkodi

ವಿದ್ಯುತ್ ತಗುಲಿ ಬಾಲಕಿ ಸಾವು,ಇಂಗಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ

Share

• ಇಂಗಳಿ ಗ್ರಾಮದಲ್ಲಿ ವಿದ್ಯುತ್‌ಗೆ ಬಾಲಕಿ ಬಲಿ
• ಸ್ಕಿಪ್ಪಿಂಗ್ ಹಗ್ಗ ತೆಗೆಯುವಾಗ ಸಂಭವಿಸಿದ ದುರಂತ
• ಮನೆಯ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವು
• ಮನೆಯಂಗಳದಲ್ಲಿ ಮಡುಗಟ್ಟಿದ ಪೋಷಕರ ಆಕ್ರಂದನ

ವಿದ್ಯುತ್ ತಗುಲಿ ಮನೆಯ ಮೇಲಿಂದ ಬಿದ್ದು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಸಾನ್ವಿ ಕಾಂಬಳೆ (9) ಎಂದು ಗುರುತಿಸಲಾಗಿದೆ. ಆಕೆ ಇಂಗಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ನಿನ್ನೆ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ, ಮನೆಯ ಮೇಲಿದ್ದ ವಿದ್ಯುತ್ ತಂತಿಯ ಮೇಲೆ ಸ್ಕಿಪ್ಪಿಂಗ್ ಹಗ್ಗ ಬಿದ್ದಿದೆ. ಹಗ್ಗವನ್ನು ತೆಗೆದುಕೊಳ್ಳಲು ಮೇಲಕ್ಕೆ ಹೋದಾಗ ಬಾಲಕಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ, ಪರಿಣಾಮ ಮನೆಯ ಮೇಲಿಂದ ಕೆಳಗೆ ಬಿದ್ದ ಕೂಡಲೇ ತಕ್ಷಣವೇ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!