Belagavi

ಬೆಳಗಾವಿ ಪೊಲೀಸರ ಬಿಗಿಬಂದೋಬಸ್ತ್: ಮಟಕಾ ಅಡ್ಡೆಗಳ ಮೇಲೆ ದಾಳಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರ ಬಂಧನ!

Share

• ಬೆಳಗಾವಿಯಲ್ಲಿ ಮಟಕಾ ದಂಧೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು
• ಗಾಂಜಾ ಅಮಲಿನಲ್ಲಿ ತೇಲುತ್ತಿದ್ದವರಿಗೆ ಬಿತ್ತು ಖಾಕಿ ಏಟು
• ಮಟಕಾ ಬುಕ್ಕಿಗಳು ಮತ್ತು ಗಾಂಜಾ ವ್ಯಸನಿಗಳ ಬಂಧನ
• ನಗರದ ನಾಲ್ಕು ಪೊಲೀಸ್ ಠಾಣೆಗಳಿಂದ ಮಿಂಚಿನ ಕಾರ್ಯಾಚರಣೆ
ಬೆಳಗಾವಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಅಕ್ರಮ ಮಟಕಾ ದಂಧೆ ಹಾಗೂ ಮಾದಕ ವಸ್ತುಗಳ ಸೇವನೆಯ ವಿರುದ್ಧ ಸಮರ ಸಾರಿರುವ ಬೆಳಗಾವಿ ಪೊಲೀಸರು, ಪ್ರತ್ಯೇಕ ದಾಳಿಗಳನ್ನು ನಡೆಸಿ ಐವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಮಾರ್ಕೆಟ್ ಠಾಣೆಯ ಪಿಎಸ್‌ಐ ವಿಠಲ ಹಾವನ್ನವರ ತಂಡವು ಭರತೇಶ ಶಾಲೆ ಬಳಿ ಮಟಕಾ ಆಡಿಸುತ್ತಿದ್ದ ಪ್ರಭಾಕರ ದಾನಣೆ ಜಾಧವನನ್ನು ಬಂಧಿಸಿದರೆ, ಹಿರೇಬಾಗೇವಾಡಿ ಪಿಐ ಸುಂದ್ರೇಶ ಹೊಳೆನ್ನವರ ತಂಡವು ಜನತಾ ಹೋಟೆಲ್ ಬಳಿ ದಂಧೆಯಲ್ಲಿದ್ದ ಅಮೀತ ಮಹಾದೇವ ಸೇತವೆಯನ್ನು ವಶಕ್ಕೆ ಪಡೆದಿದೆ. ಇನ್ನು ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ, ಮಾರಿಹಾಳ ಪಿಎಸ್‌ಐ ಮಂಜುನಾಥ ಹುಲಕುಂದ ತಂಡವು ಗಾಂಜಾ ಸೇವಿಸಿದ್ದ ವಿನಾಯಕ ಫಕೀರಾ ರಾಜಗೋಳ ಮತ್ತು ಗಜಾನನ ಅಶೋಕ ಅಗಸಿಮನಿಯನ್ನು ಬಂಧಿಸಿದೆ. ಇತ್ತ ಖಡೇಬಜಾರ್ ಠಾಣೆಯ ಎಎಸ್‌ಐ ಜೆ. ಐ ದೇವಡಿ ಅವರು ರೈಲ್ವೆ ಸ್ಟೇಷನ್ ರಸ್ತೆ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಶ್ರೇಯಸ್ ಅನಂತ ಮಾಂಜರೇಕರ್ ಎಂಬಾತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆ ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಕೆ.ಪಿ ಕಾಯ್ದೆ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Tags:

error: Content is protected !!