ಕಿಮ್ಸ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌದರಿ ಭೇಟಿ ನೀಡಿ,ಮಹಿಳಾ ಮತ್ತು ಮಕ್ಕಳ ಚಿಕಿತ್ಸಾ ಸುರಕ್ಷಿತ ಕ್ರಮಗಳ ಪರಿಶೀಲನೆ ನಡೆಸಿದರು.


ಇದೇ ವೇಳೆ ಸವದತ್ತಿ ಬಾಲಕನ ಚಿಕಿತ್ಸೆಗೆ ನೆರವು ನೀಡಿದ ಅವರು,ಸವದತ್ತಿ ಬಾಲಕನಿಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಮಾಡಬೇಕಿದ್ದ 11 ವರ್ಷದ ಮಗುವನ್ನು ಕಿಮ್ಸ್ ನಿಂದ ಇಂದಿರಾ ಗಾಂಧಿ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು.ಅಲ್ಲಿಂದ ಜೈನ ಆಸ್ಪತ್ರೆಗೆ ರೆಫರ್ ಆಗಿತ್ತು.ಆರೋಗ್ಯ ಸ್ಕೀಮ್ ನಲ್ಲಿ ಮಗುವಿಗೆ ಚಿಕಿತ್ಸೆ ಕೊಡಲಾಗುವುದು
ಆದರೆ ಸ್ಕೀಮ್ ಅನ್ವಯ ಆಗಬೇಕೆಂದರೆ 2 ಲಕ್ಷ ರೂಪಾಯಿ ಹಣ ಕಟ್ಟಬೇಕಿದೆ.ಹೀಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೊಡಿಸಲಾಗುವುದು ಮಗುವಿನ ಚಿಕಿತ್ಸೆಗೆ ಎಲ್ಲ ರೀತಿಯ ನೆರವು ನೀಡಲಾಗುವುದೆಂದರು..

ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು,ಹುಬ್ಬಳ್ಳಿ ಕಿಮ್ಸ್ ನಲ್ಲಿ ಹೆಚ್ಚಿನ ದೂರುಗಳಿಲ್ಲಾ,ಬೇರೆ ಜಿಲ್ಲೆಗಳಿಂದ ಹೆಚ್ಚಿನ ರೋಗಿಗಳು ಬರ್ತಾರೆ.ಹೀಗಾಗಿ ಕಿಮ್ಸ್ ನಲ್ಲಿ ವರ್ಕ್ ಲೋಡ್ ಹೆಚ್ಚಾಗಿದೆ.ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಡ್ ಸಂಖ್ಯೆ ಕಡಿಮೆಯಿವೆ,ಕೆಲವು ರೋಗಿಗಳನ್ನು ನೆಲದ ಮೇಲೆ ಮಲಗಿಸಲಾಗುತ್ತಿದೆ. ಕೆಲ ಬೆಡ್ ಗಳ ಮೇಲೆ ಇಬ್ಬರನ್ನು ಮಲಗಿಸಲಾಗುತ್ತಿದೆ ಈ ಬಗ್ಗೆ ಸಿಎಂ ಗಮನಕ್ಕೆ ತರ್ತೇವೆ,ಸಿಬ್ಬಂದಿ ಕೊರತೆ ಬಗ್ಗೆ ಕೂಡಾ ಸಿಎಂ ಗಮನಕ್ಕೆ ತರ್ತೇನೆ,ಹೆರಿಗೆ ಸಮಯದಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಸಾವುಗಳಾಗುತ್ತಿವೆ.ಈ ಬಗ್ಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಕುಡಿಯೋ ನೀರಿನ ವ್ಯವಸ್ಥೆ ಗೆ ಸೂಚಿಸಲಾಗಿದೆಂದರು..
