ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶ ವಾಪಾಸ್ ತೆಗೆದಿದ್ದನ್ನು ಖಂಡಿಸಿ ಶ್ರೀರಾಮ ಸೇನಾದಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಿಎಂ, ಡಿಸಿಎಂ ಹಾಗೂ ಶಿಕ್ಷಣ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದಿನ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರ ಕುರಿತು ಅಧಿಸೂಚನೆ ರದ್ದು ಮಾಡಿತ್ತು, ಆದರೇ ಈಗಿರುವ ಸರ್ಕಾರ ಹಿಜಾಬ್ ಧರಿಸಲು ಅಧಿಸೂಚನೆ ನೀಡಿದ್ದು ಖಂಡನೀಯ ಎಂದರು.

ಹಿಜಾಬ್ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಕೋದಾದ್ರೆ ನಾವೂ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲ ಹಾಕಿಕೊಂಡು ಬನ್ನಿ ಎಂದು ಹೇಳುತ್ತೇವೆ ಎಂದರು.
ಪ್ರತಿಭಟನೆ ಸಂದರ್ಭದಲ್ಲಿ ಅಪ್ಪಣ್ಣ ದಿವಟಗಿ, ಮಂಜುನಾಥ ಕಾಟಕರ, ಯಶೋಧಾ ತಾಂಬೆ, ಬಸವರಾಜ ಗೌಡರ, ಮಹಾಂತೇಶ್ ಟೊಂಗಳಿ, ಗುಣಧರ ದಡೋತಿ, ಪ್ರವೀಣ್ ಮಾಳದಕರ ಇದ್ದರು.
