hubbali

ಜೈನ ಮಂದಿರದಲ್ಲಿ ಕಳ್ಳತನ ” ಹತ್ತು ಲಕ್ಷಾಂತರ ಮೌಲ್ಯದ ಬೆಳ್ಳಿ ಮೂರ್ತಿ ಕದ್ದು ಎಸ್ಕೇಪ್!

Share

ಹುಬ್ಬಳ್ಳಿಯ ಹೊಸೂರು ಕ್ರಾಸ್ ಬಳಿಯಿರುವ ಜೈನ್‌ ಮಂದಿರದಲ್ಲಿ ನಿನ್ನೆ ತಡರಾತ್ರಿ ಕಳ್ಳತನವೊಂದು ನಡೆದಿದ್ದು ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ,ನಿನ್ನೆ ತಡರಾತ್ರಿ ಕಳ್ಳರ‌ ಟಿಮ್ ವೊಂದು ಜೈನ್ ಮಂದಿರಕ್ಕೆ ನುಗ್ಗಿ
ಮೊದಲಿಗೆ ಸಿಸಿಟಿವಿ ಕ್ಯಾಮೆರಾದ ಕೇಬಲ್‌ಗಳನ್ನು ಕಟ್ ಮಾಡಿದ್ದಾರೆ. ಆನಂತರ ದೇವಸ್ಥಾನದಲ್ಲಿದ್ದ ಮೂರು ಮೂರ್ತಿ ಮೇಲಿದ್ದ ಕಿರೀಟ , ಎರಡು ಚತ್ರ,ಆರ್ತಿ ತಟ್ಟೆ,ಗಲ್ಲೆ‌‌ಪೆಟ್ಟಿಗೆಯಲ್ಲಿದ್ದ ಹಣ ಕದ್ದು ಎಸ್ಕೇಪ್ ಆಗಿದ್ದಾರೆ.ಒಟ್ಟು ಹನ್ನೆರಡು ಲಕ್ಷ ಮೌಲ್ಯದ ಬೆಳ್ಳಿ ಸೇರಿದಂತೆ ಗಲ್ಲಾ ಪೆಟ್ಟಿಗೆಯಲ್ಲಿದ್ದ ಇಪ್ಪತ್ತೈದು ಸಾವಿರ ಹಣ ಕಳ್ಳತನ ಮಾಡಿದ್ದಾರೆ.ಇನ್ನೂ ಸ್ಥಳಕ್ಕೆ ವಿದ್ಯಾ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳು, ಹಾಗೂ ಬೆರಳಚ್ಚು ತಜ್ಞರು,ಶ್ವಾನ ದಳದವ್ರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ನಲ್ಲಿ ಕಳ್ಳರು ರಾಜರೋಷವಾಗಿ ಕಳ್ಳತನ‌‌ ಮಾಡುತ್ತಿರುವುದು ಹುಬ್ಬಳ್ಳಿ ಜನರಲ್ಲಿ ಆತಂಕ ಮೂಡಿಸಿದ್ದು ಪೊಲೀಸ್ ಇಲಾಖೆ ಕಳ್ಳತನಕ್ಕೆ‌ ಬ್ರೇಕ್ ಹಾಕಬೇಕಿದೆ

Tags:

error: Content is protected !!