Hukkeri

ಕಾರ್ಮಿಕರು ಶ್ರದ್ಧೆಯಿಂದ ಕೇಲಸ ಮಾಡಿದರೆ ಮಾತ್ರ ದುಡುಮೆಗೆ ಬೆಲೆ ಸಿಗುತ್ತದೆ – ಕೆ ಬಿ ಬಡಿಗೇರ

Share

ಕಾರ್ಮಿಕರು ಶ್ರದ್ದೆಯಿಂದ ಕೆಲಸ ಮಾಡಿದರೆ ಮಾತ್ರ 12 ನೇ ಶತಮಾನದ ಬಸವಣ್ಣನವರ ಹೇಳಿದ ಕಾಯಕವೇ ಕೈಲಾಸ ಎಂಬ ಮಾತಿಗೆ ಬೆಲೆ ಸಿಗುತ್ತದೆ ಎಂದು ನಿವೃತ್ತ ಕರ್ನಾಟಕ ವಿದ್ಯುತ್ ನಿಗಮದ ಉದ್ಯೋಗಿ ಕೆ ಬಿ ಬಡಿಗೇರ ಹೇಳಿದರು.

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ವಿದ್ಯುತ್ ನಿಗಮದ ಘಟಪ್ರಭಾ ಯೋಜನಾ ಪ್ರದೇಶದ ವಸತಿ ನಿಲಯದ ಬಯಲು ರಂಗ ಮಂದಿರದಲ್ಲಿ ಹಮ್ಮಿಕೋಂಡ ರಾಷ್ಟ್ರೀಯ ಕಾರ್ಮಿಕ ದಿನಾಚಾರಣೆ ಕಾರ್ಯಕ್ರಮವನ್ನು ಮಾಜಿ ಉದ್ಯೋಗಿ ಮತ್ತು ಕಾರ್ಮಿಕರ ಮುಖಂಡ ಕೆ ಬಿ ಬಡಿಗೇರ ದೀಪ ಬೆಳಗಿಸಿ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಯ೮ನಿರ್ವಾಹಕ ಅಭಿಯಂತರ ಡಿ ಬಸವರಾಜು ಘಟಪ್ರಭಾ ವಿದ್ಯುದಗಾರ ದಲ್ಲಿ ಕೆಲಸ ಮಾಡುವ ಕಾರ್ಮಿಕರು ನೈಪುನ್ಯತೆಯಿಂದ ಕಾರ್ಯ ನಿರ್ವಹಿಸಿ ಸತತ 3 ವರ್ಷಗಳಿಂದ ಉತ್ತಮ ವಿದ್ಯುತ್ ಉತ್ಪಾದನೆ ಯನ್ನು ಗರಿಷ್ಟ ಮಟ್ಟದಲ್ಲಿ ತಲುಪಿಸಿ ಉತ್ತಮ ಕಾರ್ಯ ಮಾಡುದ್ದಾರೆ ಅವರಿಗೆಲ್ಲಾ ಅಭಿನಂದನೆ ಸಲ್ಲಿಸುತ್ತೆನೆ ಎಂದರು

ಮುಖ್ಯ ಅಥಿತಿ ಕೆ ಬಿ ಬಡಿಗೇರ ಮಾತನಾಡಿ ಎಲ್ಲ ಉದ್ಯೋಗಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಮಾತ್ರ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡುಗೆ ನಿಜವಾದ ಅರ್ಥ ಬರುತ್ತದೆ ಎಂದರು
ವೇದಿಕೆ ಮೇಲೆ ಕೆ ಪಿ ಸಿ ಎಂಪ್ಲಾಯಿಜ ಯೂನಿಯನ್ ನಿರ್ದೆಶಕ ಎಸ್ ಜಗನ್ನಾಥ, ಆಸಿಫ್ ಬಂದೆನವಾಜ, ಸಂತೋಷ ಕಾಂಬಳೆ, ಹರ್ಡಿಕರ, ಭರತ ಸಿಂಘೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಯಿಷಾ ಹಸ್ಮಾ, ಸಿ ಪಿ ಸುಷ್ಮಾ, ಮಹೇಶ ಪಾಟೀಲ, ವಿಠ್ಠಲ್ ನಾಯಿಕವಾಡಿ, ಸುನಿಲ್ ,ಭರತ ತಳವಾರ ಉಪಸ್ಥಿತರಿದ್ದರು.
ನಂತರ ಕೆ ಬ೮ ಬೆಇಗೇರ ಮತ್ತು ಭರತ ತಳವಾರ ಇವರಿಗೆ ಕೆ ಪಿ ಸಿ ವತಿಯಿಂದ ಸತ್ಕರುಸಿ ಅಭಿನಂದಿಸಲಾಯಿತು.

Tags:

error: Content is protected !!