Vijaypura

ಶಾಸಕ ಯತ್ನಾಳ ಹೊಸ ಪಕ್ಷ ಮಾಡಲಿ, ನಾನು ಯತ್ನಾಳಗೆ ಫುಲ್ ಸಪೋರ್ಟ್ ಮಾಡುತ್ತೇನೆ; ಸಚಿವ ಎಂ.ಬಿ.ಪಾಟೀಲ

Share

ಸದ್ಯ ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ‌. ಹಿಜಾಬ್ ವಿವಾದದ ಕುರಿತು ರಾಜ್ಯದಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತು ಸಚಿವ ಎಂ‌.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ಬಿಜೆಪಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಬಿಜೆಪಿಯವ್ರು ಜನಿವಾರ ತಗ್ದಾಗ ಗಲಾಟೆ ಮಾಡಿದ್ರೂ, ಅದಕ್ಕಾಗಿ ನಾವು ಹಿಜಾಬ್ ತೆಗದ್ವು ಎಲ್ಲ ಜಾತಿಗಳನ್ನು ಒಂದು ಮಾಡಿದ್ದೇವೆ ಎಂದು ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ ಹೇಳಿದರು. ನಾವು ಎಲ್ಲವನ್ನೂ ಅಲೌಮ್ ಮಾಡಿದ್ದೇವೆ, ನಾವು ಸೆಲೆಕ್ಟಿವ್ ಅಲ್ಲಾ,ನಾವು ಎಲ್ಲ ಜಾತಿ ಧರ್ಮದವರಿಗೆ ಗೌರವ ನೀಡುತ್ತೇವೆ ಎಂದರು. ಮಠದ್ಮೇಲೆ ಕೇಸರಿ ಇತ್ತು ಆದ್ರೇ, ಶಾಲೆಗಳಲ್ಲಿ ಕೇಸರಿ ಇರಲಿಲ್ಲಾ, ವಿಭುತಿ, ನಾಮ, ಜನಿವಾರ, ಶಿವಲಿಂಗ ಹಾಕಿಕೊಂಡು ಹೋಗುತ್ತಿದ್ದರು ಎಂದರು. ಇನ್ನೂ ಕೇಸರಿ ಶಾಲು ಕೊಡುತ್ತೇನೆ ಎಂದು ಶಾಸಕ ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯತ್ನಾಳಗೆ ಸಚಿವ ಪಾಟೀಲ ಕಿಡಿಕಾರಿದರು. ನಾನು ಯತ್ನಾಳ ಬಗ್ಗೆ ಮಾತನಾಡುವುದಿಲ್ಲಾ, ಯತ್ನಾಳ ಟೋಪಿ, ನಮಾಜ್, ಟಿಪ್ಪು ಜಯಂತಿ ಮಾಡಿ ಬಿಟ್ಟಿದ್ದಾರೆ, ಶಾಸಕ ಯತ್ನಾಳ ಹೊಸ ಪಕ್ಷ ಮಾಡಲಿ, ನಾನು ಯತ್ನಾಳಗೆ ಫುಲ್ ಸಪೋರ್ಟ್ ಮಾಡುತ್ತೇನೆ ಎಂದರು. ತಮಿಳುನಾಡಿನ ವಿಜಯ್ ತರಹ ಯತ್ನಾಳ ಹೊಸ ಪಕ್ಷ ಕಟ್ಟಿ ಸಿಎಂ ಆಗಲಿ ಎಂದು ವ್ಯಂಗ್ಯವಾಡಿದರು. ಆದ್ರೇ, ಯತ್ನಾಳ ಬಿಜೆಪಿಗೆ ಬ್ಲ್ಯಾಕ್ ಮಾಡುತ್ತಿದ್ದಾರೆ.

ಬಿಜೆಪಿ ಪಕ್ಷಕ್ಕೆ ಕರೆದುಕೊಳ್ಳಲಿ ಎಂದು ಹೀಗೆ ಮಾಡುತ್ತಿದ್ದಾರೆ, ವಿಜಯಪುರ ಬಿಜೆಪಿ ಟಿಕೆಟ್ ನೀಡಲಿ ಎಂದು ಯತ್ನಾಳ ಹೊಸ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದ ಸಚಿವ ಪಾಟೀಲ ವ್ಯಂಗ್ಯವಾಡಿದರು.

 

 

Tags:

error: Content is protected !!