Accident

ಬಿರುಗಾಳಿಗೆ ಮರ ಬಿದ್ದು ವೃದ್ಧ ಸಾವು

Share

ಬಿರುಗಾಳಿಗೆ ಮರ ಬಿದ್ದು ವೃದ್ಧ ಸಾವು

 

ಬಿರುಗಾಳಿಗೆ ಮರ ಬಿದ್ದು ವೃದ್ಧ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದಲ್ಲಿ ನಡೆದಿದೆ. ವೃದ್ಧ ಬಸಲಿಂಗಪ್ಪ ಕಡೂರ್ (68) ಸಾವನ್ನಪ್ಪಿದ ದುರ್ದೈವಿ. ನಿನ್ನೆ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಯಲ್ಲಿ ರಸ್ತೆ ಮೇಲೆ ನಡೆದುಕೊಂಡು ಹೋಗ್ತಿದ್ದ ವೇಳೆ ಗಾಳಿಗೆ ಮರ ಮುರಿದು ಬಿದ್ದು ಮರದ ಕೆಳಗೆ ಸಿಕ್ಕು ಬಸಲಿಂಗಪ್ಪ ಸಾವನ್ನಪ್ಪಿದ್ದಾರೆ.

 

ಈ ಕುರಿತು ಮುದ್ದೇಬಿಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!