Accident

ಭಾರಿ ಗಾಳಿ ಸಹಿತ ಮಳೆಗೆ ಮನೆಯ ಮೇಲ್ಪಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವು

Share

ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭಾರಿ ಗಾಳಿ ಸಹಿತ ಮಳೆಗೆ ಮನೆಯ ಮೇಲ್ಪಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೊರಗಟ್ಟಿ ಗ್ರಾಮದಲ್ಲಿ ನಡೆದಿದೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ.

 

ಮೃತ ದುರ್ದೈವಿಗಳು ಗುರುನಾಥ ಬಡಿಗೇರ (35),ಜ್ಯೋತಿ ಬಡಿಗೇರು (28), ಕಾಳಮ್ಮ ಬಡಿಗೇರ (13),ಕೀರ್ತಿ ಬಡಿಗೇರ (9) ಎನ್ನುವವರಾಗಿದ್ದಾರೆ. ಸ್ವಂತ ಮನೆಯ ದುರಸ್ತಿ ಮಾಡುತ್ತಿದ್ದ ಕಾರಣ ಹಳೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬಂದಿ ನಾಲ್ವರ ಶವಗಳನ್ನು ಹೊರ ತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags:

error: Content is protected !!