Belagavi

ರುಕ್ಮಿಣಿ ನಗರದಲ್ಲಿ ಕಸದ ರಾಶಿ: ದುರ್ವಾಸನೆಯಿಂದ ಸ್ಥಳೀಯರು ಹೈರಾಣು, ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

Share

ಬೆಳಗಾವಿ ನಗರದ ರುಕ್ಮಿಣಿ ನಗರದ 10ನೇ ಕ್ರಾಸ್‌ನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಸದ ರಾಶಿಯಿಂದಾಗಿ ಇಡೀ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ಆಳಲು ತೋಡಿಕೊಂಡಿದ್ದಾರೆ.


15 ದಿನಕ್ಕೊಮ್ಮೆ ಬರುವ ಕಸದ ಗಾಡಿ!
ಮಹಾನಗರ ಪಾಲಿಕೆಯ ಕಸದ ವಾಹನವು ಕೇವಲ 15 ದಿನಕ್ಕೊಮ್ಮೆ ಮಾತ್ರ ಇಲ್ಲಿಗೆ ಬರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ನಿಯಮಿತವಾಗಿ ಕಸ ವಿಲೇವಾರಿ ಮಾಡದ ಕಾರಣ, ದಿನದಿಂದ ದಿನಕ್ಕೆ ಕಸದ ಪ್ರಮಾಣ ಹೆಚ್ಚಾಗುತ್ತಿದ್ದು, ರಸ್ತೆ ದಾಟುವುದೇ ಕಷ್ಟಕರವಾಗಿದೆ.

ಸ್ಪಂದಿಸದ ಮೇಲ್ವಿಚಾರಕ ಮಹೇಶ್: ಸಾರ್ವಜನಿಕರ ಆರೋಪ
ಈ ಗಂಭೀರ ಸಮಸ್ಯೆಯ ಕುರಿತು ಪಾಲಿಕೆಯ ಕಸ ವಿಲೇವಾರಿ ಮೇಲ್ವಿಚಾರಕರಾದ ಮಹೇಶ್ ಅವರಿಗೆ ಹಲವು ಬಾರಿ ದೂರು ನೀಡಿದರೂ ಸಹ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲಾ ಮಕ್ಕಳಿಗೂ ತಪ್ಪದ ಸಂಕಷ್ಟ!
ಕಸ ಸುರಿಯುವ ಜಾಗದ ಹತ್ತಿರದಲ್ಲೇ ಸರ್ಕಾರಿ ಶಾಲೆ ಇದ್ದು, ಪ್ರತಿದಿನ ಶಾಲೆಗೆ ಬರುವ ಸಣ್ಣ ಸಣ್ಣ ವಿದ್ಯಾರ್ಥಿಗಳು ಈ ದುರ್ವಾಸನೆ ಹಾಗೂ ನೊಣಗಳ ಕಾಟದಿಂದ ನರಕಯಾತನೆ ಅನುಭವಿಸುವಂತಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ.

ಸ್ಥಳೀಯರ ಆಗ್ರಹ:*
“ಇಲ್ಲಿ ತಕ್ಷಣವೇ ಕಸ ಸುರಿಯುವುದನ್ನು ನಿಲ್ಲಿಸಬೇಕು. ಮಹಾನಗರ ಪಾಲಿಕೆಯು ಪ್ರತಿದಿನ ಕಸದ ಗಾಡಿಯನ್ನು ಕಳುಹಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ರುಕ್ಮಿಣಿ ನಗರದ ನಿವಾಸಿಗಳು ಎಚ್ಚರಿಸಿದ್ದಾರೆ.

Tags:

error: Content is protected !!