ಯೋಗಭ್ಯಾಸವು ಆರೋಗ್ಯ ಕಾಪಾಡುವ ಹಾಗೂ ರೋಗ ನಿವಾರಣೆಗೆ ಮಾರ್ಗದರ್ಶಿಯಾದ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದ್ದು ಪ್ರತಿಯೋಬ್ಬರು ಯೋಗದ ವಿಧಾನಗಳನ್ನು ಅನುಸರಿಸುವುದು ಅಗತ್ಯ” ಎಂದು ಚಿಕ್ಕೋಡಿಯ ಚರಮೂರ್ತಿ ಮಠ ಸಂಪದನಾ ಸ್ವಾಮಿಜಿಯವರು ಹೇಳಿದರು.


ಚಿಕ್ಕೋಡಿಯ ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜು ಆವರಣದಲ್ಲಿ ಭಾರತ ಸರ್ಕಾರದ ಆಯುಷ್ ಸಚಿವಾಲಯ, ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಪ್ರಾಯೋಜಕತೆಯೊಂದಿಗೆ “೧೨ನೇ ಅಂತರಾಷ್ಟ್ರೀಯ ಯೋಗ ದಿನ ೨೦೨೬” ಪೂರ್ವಭಾವಿಯಾಗಿ “ಯೋಗ ಮಹೋತ್ಸವ ೨೦೨೬” ಎಂಬ ವಿಶೇಷ ೩೯ನೇ ದಿನದ ಕೌಂಟ್ಡೌನ್(೧೦೦ ದಿನ) ಸಾರ್ವಜನಿಕನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯ ಕಾಪಾಡಿಕೊಳ್ಳಲು ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಅಳವಡಿಸಿಕೊಳ್ಳಲು ಕರೆ ನೀಡಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಉಪಾದ್ಯಕ್ಷರಾದ ಶ್ರೀ ಜಗದೀಶ ಕವಟಗಿಮಠ ಮಾತನಾಡಿ, ಪ್ರತಿನಿತ್ಯ ಯೋಗವನ್ನು ಜೀವನದಲ್ಲಿ ರೂಢಿಸಿಕೊಳ್ಳುವದರಿಂದ ವೈಯಕ್ತಿಕವಾಗಿ ಸಾಮಾಜಿಕವಾಗಿ ಪರಿವರ್ತನೆ ತರಲು ಸಾದ್ಯ ಹಾಗೂ ಸಮಾಜದಲ್ಲಿ ಯೋಗದ ಅರಿವು ಮೂಡಿಸಲು ಹಾಗೂ ಯುವ ಪೀಳಿಗೆಯನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸಲು ಕೆ.ಎಲ್.ಇ ಆಯುರ್ವೇದ ಮಹಾವಿದ್ಯಾಲಯ ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣಕುಮಾರ ಮುತ್ನಾಳಿ ಮಾತನಾಡುತ್ತಾ ಜಗತ್ತಿನ ೧೯೫ ದೇಶಗಳಲ್ಲಿ ೧೭೦ ದೇಶಗಳು ಯೋಗವನ್ನು ಅಳವಡಿಸಿಕೊಂಡಿವೆ. ಯೋಗವು ದೇಹ, ಮನಸ್ಸು ಮತ್ತು ಉಸಿರಾಟವನ್ನು ಸಮತೋಲನಗೊಳಿಸುವ ಪ್ರಾಚೀನ ಭಾರತೀಯ ಪದ್ಧತಿಯಾಗಿದೆ. ಇಂದು ವಿಶ್ವದಾದ್ಯಂತ ಆರೋಗ್ಯಕರ ಜೀವನಶೈಲಿಯ ಭಾಗವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವು ಮಹಾವಿದ್ಯಾಲಯದ ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಮುಖ್ಯಸ್ಥರಾದ ಡಾ ಸಂತೋಷ ಶಿವಣ್ಣವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.
ಕಾರ್ಯಕ್ರಮವನ್ನು ನಿಂಗಪ್ಪಾ ಪೂಜಾರಿ, ನಿರೂಪಿಸಿದರು, ಹಾಗೂ ಪ್ರಾಸ್ತಾವಿಕವಾಗಿ ಡಾ. ಸುಧೀಂದ್ರ ಹೊನವಾಡ ನೆರವೆರಿಸಿದರು. ವಂದರ್ನಾಪನೆಯನ್ನು ಡಾ ರವಿ ಮಡಿವಾಳರ ನೆರವೆರಿಸಿದರು ಇದೇ ಸಮಯದಲ್ಲಿ ಚಿಕ್ಕೋಡಿ ಕೆ ಎಲ್ ಇ ಅಂಗ ಸಂಸ್ಥೆಗಳ ಪ್ರಾರ್ಚಾಯರು, ವಿದ್ಯಾರ್ಥಿಗಳು ಆಯುರ್ವೇದ ಕಾಲೇಜಿನ ಉಪನ್ಯಾಸಕರು, ವೈದ್ಯರು, ಹಾಗೂ ೧೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ಸಂದರ್ಭದಲ್ಲಿ ವಿಶೇಷ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿದ್ದು, ಭಾಗವಹಿಸಿದವರು ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನಾಭ್ಯಾಸಗಳನ್ನು ಅಭ್ಯಾಸಿಸಿದರು.
