ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಐತಿಹಾಸಿಕ ಗ್ರಾಮ ಕಕ್ಕೇರಿಯಲ್ಲಿ ವರುಣದೇವ ಅಕ್ಷರಶಃ ಆರ್ಭಟಿಸಿದ್ದಾನೆ. ನಿನ್ನೆ ಸುರಿದ ಭೀಕರ ಗಾಳಿ-ಮಳೆಗೆ ಇಡೀ ಪರಿಸರವೇ ನಲುಗಿ ಹೋಗಿದ್ದು, ದೈತ್ಯ ಮರಗಳು ಬುಡಮೇಲಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


ಖಾನಾಪುರ ತಾಲೂಕಿನ ಐತಿಹಾಸಿಕ ಕಕ್ಕೇರಿ ಗ್ರಾಮದಲ್ಲಿ ನಿನ್ನೆ ಸಂಜೆ ಮಳೆರಾಯನ ಅಬ್ಬರಕ್ಕೆ ರುದ್ರಾವತಾರ ಕಂಡುಬಂದಿದೆ. ಸಾಧಾರಣ ಮಳೆಯೆಂದು ಭಾವಿಸಿದ ಜನರಿಗೆ ಕ್ಷಣಾರ್ಧದಲ್ಲಿ ಬೀಸಿದ ಬಿರುಗಾಳಿ ಅಕ್ಷರಶಃ ನಡುಕ ಹುಟ್ಟಿಸಿದೆ. ಬಿರುಗಾಳಿಯ ರಭಸಕ್ಕೆ ಬೃಹತ್ ಮರಗಳು ಒಂದರ ಮೇಲೊಂದು ಧರೆಗುರುಳುವ ದೃಶ್ಯಗಳು ನೋಡಿದರೆ ಮೈ ಜುಮ್ ಎನ್ನುವಂತಿವೆ. ನಾವು ಸಿನಿಮಾಗಳಲ್ಲಿ ಕಾಣುವ ದೃಶ್ಯಗಳಿಗಿಂತಲೂ ಭೀಕರವಾಗಿ ಪ್ರಕೃತಿ ಮುನಿದಂತೆ ಕಂಡ ಈ ವೀಡಿಯೋಗಳು ಈಗ ಕಕ್ಕೇರಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿವೆ. ಒಟ್ಟಾರೆಯಾಗಿ ನಿನ್ನೆಯ ಮಹಾ ಮಳೆಯ ಆರ್ಭಟಕ್ಕೆ ಖಾನಾಪುರ ತಾಲೂಕು ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

