ಧನಂಜಯ ಜಾಧವ್ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಕನೂರು ಫಾಟಾದಲ್ಲಿ ದಾರಿ ತಿಳಿಯದೆ ಪರದಾಡುತ್ತಿದ್ದ ಪ್ರಯಾಣಿಕರ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ನಾಮಫಲಕ ಇಲ್ಲದ ಸಮಸ್ಯೆಯನ್ನು ಅರಿತ ಬಿಜೆಪಿ ಮುಖಂಡ ಧನಂಜಯ ಜಾಧವ್ ಅವರು ತಕ್ಷಣವೇ ಸ್ಪಂದಿಸಿ ಮಾದರಿಯಾಗಿದ್ದಾರೆ.


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಕನೂರು ಗ್ರಾಮದ ಶ್ರೀ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವವು ಮುಕ್ತಾಯದ ಹಂತಕ್ಕೆ ತಲುಪಿದೆ. ಆದರೆ, ಬಾಕನೂರು ಮತ್ತು ಬಡಸ ಗ್ರಾಮದ ಫಾಟಾದಲ್ಲಿ (ತಿರುವು) ಗ್ರಾಮಕ್ಕೆ ಹೋಗಲು ದಾರಿ ತೋರಿಸುವ ಯಾವುದೇ ನಾಮಫಲಕ ಇರಲಿಲ್ಲ. ಇದರಿಂದಾಗಿ ಜಾತ್ರೆಗೆ ಬರುವ ನಂಟರು, ಭಕ್ತಾದಿಗಳು ಹಾಗೂ ಪ್ರಯಾಣಿಕರು ಬಾಕನೂರಿಗೆ ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬ ಗೊಂದಲಕ್ಕೊಳಗಾಗುತ್ತಿದ್ದರು.
ಇತ್ತೀಚೆಗೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಾಜಿ ಮಂಡಲ ಅಧ್ಯಕ್ಷರಾದ ಧನಂಜಯ ಜಾಧವ್ ಅವರು ಮಹಾಲಕ್ಷ್ಮಿಯ ದರ್ಶನಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಕಾರ್ಯಕರ್ತರು ಈ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು. ಸಮಸ್ಯೆಯ ತೀವ್ರತೆ ಮತ್ತು ನಾಮಫಲಕದ ಅಗತ್ಯತೆಯನ್ನು ಮನಗಂಡ ಧನಂಜಯ ಜಾಧವ್ ಅವರು ತಕ್ಷಣವೇ ತಮ್ಮ ಸ್ವಂತ ಖರ್ಚಿನಲ್ಲಿ ಬಾಕನೂರು ಮತ್ತು ಬಡಸ ಗ್ರಾಮಗಳಿಗೆ ಹೋಗುವ ದಾರಿಯನ್ನು ಸೂಚಿಸುವ ಕಾಯಂ ನಾಮಫಲಕವನ್ನು ಅಳವಡಿಸಿಕೊಟ್ಟಿದ್ದಾರೆ.


ನಾಮಫಲಕ ಅಳವಡಿಕೆಯಿಂದಾಗಿ ಗ್ರಾಮಸ್ಥರು ಮತ್ತು ಭಕ್ತಾದಿಗಳು ಸಂತಸ ವ್ಯಕ್ತಪಡಿಸಿದ್ದು, ಧನಂಜಯ ಜಾಧವ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ನಾಮಫಲಕದ ಉದ್ಘಾಟನಾ ಸಮಾರಂಭದಲ್ಲಿ ಕೆ. ಡಿ. ಪಾಟೀಲ, ಸಂದೀಪ್ ಗೋಡ್ಸೆ, ಕೆ. ಎನ್. ಪಾಟೀಲ, ನಾಮದೇವ ಗೋಡ್ಸೆ, ಪ್ರಹ್ಲಾದ್ ಗುರವ್, ಸಂಜಯ್ ಪಾಟೀಲ, ಗೋಪಾಲ್ ಗಾವಡೆ, ನಿಂಗು ಗಾವಡೆ, ದೀಪಕ್ ನಾಯ್ಕ್, ಸಂಭಾಜಿ ನಾಯ್ಕ್, ಚೇತನ್ ಪಾಟೀಲ, ಗೋಪಾಳ್ ಪಾಟೀಲ, ಬಾಳು ಚಂದಿಲ್ಕರ್, ಪ್ರಕಾಶ್ ಸುತಾರ್, ಕಲ್ಲಪ್ಪ ಕಾಂಬಳೆ, ಅನಿಲ್ ಪಾಟೀಲ, ಪರಶುರಾಮ್ ಪಾಟೀಲ ಸೇರಿದಂತೆ ಬಡಸ, ಬಾಕನೂರು ಮತ್ತು ಬೆಳವಟ್ಟಿ ಗ್ರಾಮಗಳ ಪ್ರಮುಖ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

