Dharwad

ಕೇಂದ್ರ ಸರ್ಕಾರ ಏನು ಮಾಡಿದರೂ ನಡೆಯುತ್ತದೆ, ಏನು ಸೋರಿಕೆಯಾದರೇನೂ ಲೆಕ್ಕಿಲ್ಲ ಬುಕ್ಕಿಲ್ಲ- ಲಾಡ್ ಕಿಡಿ.

Share

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಕುರಿತಾಗಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ಕಿರಿಕಾರಿದರು. ಕೇಂದ್ರ ಸರ್ಕಾರ ಏನು ಮಾಡಿದ್ರೂ ನಡೆಯುತ್ತದೆ, ಏನು ಸೋರಿಕೆಯಾದ್ರೂ ಲೆಕ್ಕಿಲ್ಲ ಎಂದು ಕುಟುಕಿದರು.

ಈ ಕುರಿತಾಗಿ ಧಾರವಾಡದಲ್ಲಿ ಮಾಧ್ಯಮಕ್ಕೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಕೇಳುವವರ್ಯಾರು..?, ಏನು ಸೋರಿಕೆಯಾದ್ರೂ ನಡೆಯುತ್ತದೆ ಅಷ್ಟೇ. ಕಳೆದ ೧೨ ವರ್ಷಗಳಿಂದ ಅವರಿಗೆ ಯಾವ ವಿಚಾರ ಕೇಳಬಹುದು, ಎಸ್ ಐ ಆರ್ ಅಡಿ ಪಶ್ಚಿಮ ಬಂಗಾಳದಲ್ಲಿ ೨೭ ಲಕ್ಷ ಮತ ತೆಗೆದರು. ಚುನಾವಣೆ ಆಯ್ತು, ಆ ೨೭ ಲಕ್ಷ ಜನ ಈ ದೇಶದ ನಿವಾಸಿ ಹೌದೋ ಅಲ್ಲವೋ..?. ಈ ದೇಶದಲ್ಲಿ ಇರುವಂತ ಅವರಿಗೆ ಮತ ಹಾಕಲು ಅವಕಾಶ ಕೊಡಲಿಲ್ಲ. ಹೆಸರು ಸರಿ‌ ಇರಲಿಲ್ಲ ಎಂದು ಮತ ಹಾಕಲು ಕೊಡಲಿಲ್ಲ. ದೇಶದಲ್ಲಿ ೧೩ ಕೋಟಿ ಜನರಿಗೆ ಟಾರ್ಗೆಟ್ ಮಾಡಲಾಗಿದೆ. ಯುಪಿಯಲ್ಲಿ ೩ ಕೋಟಿ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ , ಕರ್ನಾಟಕದಲ್ಲಿ ಮುಂದೆ ಮಾಡ್ತಾರೆ. ತಮಿಳುನಾಡಿನಲ್ಲಿ ೭೦ ಲಕ್ಷ , ಬಿಹಾರದಲ್ಲಿ ೪೫ ಲಕ್ಷ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಉಲ್ಟಾ ೪೫ ಲಕ್ಷ ಜಮಾ ಮಾಡಿದ್ದಾರೆ. ಹರಿಯಾಣದಲ್ಲಿ ೨೫ ಲಕ್ಷ ಆ್ಯಡ್ ಮಾಡಿದ್ದಾರೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಮಾಡುವುದಕ್ಕೆ ಪ್ರಶ್ನೆ ಕೇಳೊರಾರು. ೨೭ ಲಕ್ಷ ಮತ ಹಾಕಲು ಬಿಡಲಿಲ್ಲ, ಅವರು ಬದುಕಿದ್ದಾರಲ್ಲ, ಅವರ ಅರ್ಜಿ ಪರಿಶೀಲನೆ ಆದ ಮೇಲೆ ಏನ್ ಮಾಡಬೇಕು ಅವರು..? . ನೀಟ್ ಸೋರಿಕೆ ಬಗ್ಗೆ ಲೆಕ್ಕ ಇಲ್ಲಾ, ಈ ದೇಶದಲ್ಲಿ ಒಬ್ಬ ದೇವರಿದ್ದಾರೆ, ಆ ಹೆಸರು ಜೈ ಅನ್ನಬೇಕು‌. ಹಿಂದೆ ಇಂದಿರಾ ಗಾಂಧಿ ಇದ್ದಾಗ ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಇತ್ತು. ಬಹಳ ಕಷ್ಟ ಸಮಯದಲ್ಲಿ ದೇಶ ಇತ್ತು, ಚೈನಾ ಕೂಡಾ ಹಾಗೆಯೇ ಇತ್ತು. ನೀವು ಈಗಾ ಲಾರ್ಜೆಸ್ಟ್ ಏಕಾನಮಿ‌ ಪಾವರಫುಲ್ ಅಂತಿರಿ. ನೀವು ಪವರ್ ಫುಲ್ ಇದ್ದು ಯಾಕೆ ಇದು, ನೀವು ಒಪ್ಪಿಕೊಳ್ಳಿ, ಹಾಗಾದ್ರೆ ದೇಶದ ಸ್ಥಿತಿ ಸರಿ‌ ಇಲ್ಲಾ, ಬಂಗಾರ ಖರೀದಿ ಯಾಕೆ ಬೇಡ ಎಂದು ಒಪ್ಪಿಕೊಳ್ರಿ‌. ನಾವು ಹಿಂದೆ ದೇಶದ ಪರಿಸ್ಥಿತಿ ಒಪ್ಪಿಕೊಂಡು ಹೇಳಿದ್ದೇವೆ, ತಾವು ಹೇಳ್ರಿ. ಮದ್ಯಮ ವರ್ಗದ ಜನರು ಹೆಚ್ಚು ಆಡಂಬರ ಮದುವೆ ಬೇಡಾ ಅಂತಿರಿ. ನೀವು ಅದಾನಿ ಮದುವೆಯಲ್ಲಿ ಹೋಗಿ ಡಾನ್ಸ್ ಮಾಡ್ತೀರಾ, ಬೇರೆಯವರನ್ನ ಕರೆ ತಂದು ೨೦ ಕೋಟಿ ಕೊಟ್ಟು ಡಾನ್ಸ್ ಮಾಡಸ್ತಾರೆ‌. ನಮಗೆ ೭೦೦ ಕೋಟಿ ಖರ್ಚು ಆದರೆ ಹೇಳಿಲ್ಲಾ , ಮಧ್ಯಮ ವರ್ಗಕ್ಕೆ ಹೇಳ್ತಿರಿ‌. ಮಧ್ಯಮ ವರ್ಗದವರು ಕಟ್ಟುವ ದುಡ್ಡಿನಲ್ಲಿ ಅಂಬಾನಿ ೩೦೦ ಲಕ್ಷ ಕೋಟಿ ವ್ಯವಹಾರ ಮಾಡುತಿದ್ದಾನೆ , ಅದು ಯಾರ ದುಡ್ಡು..? . ಇವರು ಮಾಡಿದ ಲಾಭ ದುಡ್ಡಲ್ಲ ಮೋದಿ ಅವರ ಆಶೀರ್ವಾದದಿಂದ ಬಂದಿರೋದು. ಇವರು ಏನು ಸಂಶೋಧನೆ ಮಾಡಿ ದುಡ್ಡು ಮಾಡಿದ್ದಲ್ಲ. ಗುಜರಾತ್, ಯುಪಿ ಬಿಹಾರದಲ್ಲಿ ನಡೆದ ಪರೀಕ್ಷೆ ವೇಳೆ ಈ‌ ರೀತಿ ಘಟನೆ ಆಗಿವೆ, ಇದು ಚರ್ಚೆಗೆನೇ ಬರಲ್ಲ, ಇವೆಲ್ಲಾ ಇಶ್ಯೂ ಅಲ್ಲಾ. ಕಾಂಗ್ರೆಸ್ ಅಧಿಕಾರ ಇರುವ ಕಡೆ ಇಲಿ‌ ಸತ್ತರೂ ಅದು ದೊಡ್ಡದು, ಕೇಂದ್ರ ಸರ್ಕಾರದ ವೈಫಲ್ಯ ಬಗ್ಗೆ ಸುದ್ದಿ‌ ಇಲ್ಲಾ. ಏನು ಸಾಧನೆ ಇವರದು, ಭಾಷಣ ಏನು‌ ಮಾಡಿದ್ದರು, ಅವರು ದೇಶದ ಸ್ಥಿತಿ ಬಗ್ಗೆ ಮಾತಾಡ್ತಾರಾ ಎಂದು ಪ್ರಶ್ನೆ ಮಾಡುವ ಮೂಲಕ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Tags:

error: Content is protected !!