Dharwad

ಸಚಿವ ಡಿ. ಸುಧಾಕರ್ ನಿಧನಕ್ಕೆ ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಸಂತಾಪ.

Share

ಸಚಿವ ಸುಧಾಕರ್ ನಿಧನಕ್ಕೆ ಕೊನರೆಡ್ಡಿ ಶೋಕ

ರಾಜ್ಯದ ಉತ್ತಮ ಅಭಿವೃದ್ಧಿ ಹರಿಕಾರನ ಅಗಲಿಕೆ

ಕಾಂಗ್ರೆಸ್ ಪಕ್ಷಕ್ಕೆ ಸಚಿವರ ನಿಧನ ದೊಡ್ಡ ನಷ್ಟ

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ: ಪ್ರಾರ್ಥನೆ

ಸಚಿವರಾಗಿ ಡಿ. ಸುಧಾಕರ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮುಂದೆಯೂ ನಾಡಿನ ಅಭಿವೃದ್ಧಿಯ ಬಗ್ಗೆ ದೊಡ್ಡ ಕನಸು ಕಂಡಿದ್ದವರು ಅವರು. ಆದರೆ ಇಂದು ಅವರ ಅಕಾಲಿಕ ನಿಧನ ತುಂಬಾ ನೋವು ತಂದಿದೆ. ಭಗವಂತನು ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಸಂತಾಪ ಸೂಚಿಸಿದ್ದಾರೆ.

ವಾಯ್ಸ್ ಓವರ್ (VO): ಈ ಕುರಿತು ಧಾರವಾಡದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, “ಸಚಿವರಾದ ಮೇಲೆ ಡಿ. ಸುಧಾಕರ್ ಅವರು ಉತ್ತಮ ಅಭಿವೃದ್ಧಿ ಆಲೋಚನೆ ಹಾಗೂ ಯೋಜನೆಗಳನ್ನು ಹೊಂದಿದ್ದರು. ಆದರೆ ಇಂದು ಅವರು ನಿಧನರಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ, ಚಿತ್ರದುರ್ಗದ ಅವರ ಅಪಾರ ಬೆಂಬಲಿಗರಿಗೂ ದೊಡ್ಡ ಮಟ್ಟದ ನೋವು ತಂದಿದೆ. ಮೃತರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ,” ಎಂದು ಪ್ರಾರ್ಥಿಸಿದರು.

 

Tags:

error: Content is protected !!