hukkeri

ಮಗಳ ಹುಟ್ಟುಹಬ್ಬದ ದಿನವೇ ತಂದೆಯ ನಿವೃತ್ತಿ: ಕಾಕತಿ ಉಪ ತಹಶೀಲ್ದಾರ್‌ಗೆ ಅದ್ದೂರಿ ಸನ್ಮಾನ

Share

• ಮಗಳ ಹುಟ್ಟುಹಬ್ಬದಂದೇ ತಂದೆಯ ನಿವೃತ್ತಿ ಸಂಭ್ರಮ
• ಕಾಕತಿ ಉಪ ತಹಶೀಲ್ದಾರ್‌ಗೆ ಅದ್ದೂರಿ ಬಿಳ್ಕೊಡುಗೆ
• ಪ್ರಾಮಾಣಿಕ ಸೇವೆಯೊಂದಿಗೆ ನಿವೃತ್ತರಾದ ಸಾಳುಂಕೆ
• ಯಮಕನಮರ್ಡಿಯಲ್ಲಿ ಅಪರೂಪದ ಭಾವನಾತ್ಮಕ ಸನ್ನಿವೇಶ

ಮಗಳ ಹುಟ್ಟುಹಬ್ಬದ ದಿನದಂದೇ ತಂದೆಯೊಬ್ಬರು ಕಂದಾಯ ಇಲಾಖೆಯಿಂದ ನಿವೃತ್ತಿ ಹೊಂದಿದ ಅಪರೂಪದ ಸನ್ನಿವೇಶ ಜರುಗಿದೆ.
ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಕ್ಷೇತ್ರದ ಕಾಕತಿ ಉಪ ತಹಶೀಲ್ದಾರ್ ಸದಾಶಿವ ಸಾಳುಂಕೆ ಅವರು ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆಯ ನಂತರ ನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅದ್ದೂರಿ ಬಿಳ್ಕೊಡುಗೆ ಹಾಗೂ ಅವರ ಮಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಸೌಮ್ಯ ಸ್ವಭಾವದ ಸದಾಶಿವ ಸಾಳುಂಕೆ ಅವರು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ ಹಾಗೂ ಉಪ ತಹಶೀಲ್ದಾರ್ ಹುದ್ದೆಗಳಲ್ಲಿ ಹುಕ್ಕೇರಿ, ಯಮಕನಮರ್ಡಿ, ಕಾಕತಿ ಸೇರಿದಂತೆ ವಿವಿಧೆಡೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದಿದ ಇವರನ್ನು ಅಭಿಮಾನಿಗಳು ಆತ್ಮೀಯವಾಗಿ ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸದಾಶಿವ ಅವರ ಸೇವೆಯನ್ನು ಕೊಂಡಾಡಿದರು. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ ಹಾಗೂ ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

Tags:

error: Content is protected !!