Hukkeri

ಹುಕ್ಕೇರಿ : ರೈತರ ಬೆಳೆಗೆ ನೀರು ನಿಡದಿದ್ದರೆ ಅಧಿಕಾರಿ ಸಸ್ಪೆಂಡ – ಶಾಸಕ ನಿಖಿಲ್ ಕತ್ತಿ.

Share

• ಹುಕ್ಕೇರಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್
• ರೈತರಿಗೆ ನೀರು ಕೊಡದಿದ್ದರೆ ಸಸ್ಪೆಂಡ್ ವಾರ್ನಿಂಗ್
• ಶಾಸಕ ನಿಖಿಲ್ ಕತ್ತಿ ಅಧಿಕಾರಿಗಳ ವಿರುದ್ಧ ಆಕ್ರೋಶ
• ಕೋಟಬಾಗಿ ಏತ ನೀರಾವರಿ ವಿಫಲಕ್ಕೆ ಗರಂ

ರೈತರು ಬೆಳೆದ ಬೇಳೆಗಳಿಗೆ ನೀರಾವರಿ ಇಲಾಖೆ ಯಿಂದ ನೀರು ನೀಡದಿದ್ದರೆ ಅಧಿಕಾರಿ ಸಸ್ಪೆಂಡ ಮಾಡಲಾಗುವದು ಎಂದು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಹೇಳಿದರು.
ಹುಕ್ಕೇರಿ ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ವಿವಿಧ ಇಲಾಖೆಗಳ ತ್ರೈಮಾಸಿಕ ಸಭೆಯಲ್ಲಿ ಮಾತನಾಡುತ್ತಾ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಯಾದರು ತಾಲೂಕಿನ ಕೋಟಬಾಗಿ ಏತ ನೀರಾವರಿ ಯೋಜನೆಯಿಂದ ಹುಲ್ಲೋಳಿ, ಹುಲ್ಲೋಳಿಹಟ್ಟಿ ಯಾದಗೂಡ ಭಾಗದ ರೈತರ ಜಮಿನುಗಳಿಗೆ ನೀರು ತಲುಪುತ್ತಿಲ್ಲಾ ಎಂದು ಕಾರಣ ಏನು ಎಂದು ನೀರಾವರಿ ಇಲಾಖೆ ಅಧಿಕಾರಿ ಮಹಿಮಗೋಳ ರವರನ್ನು ವಿಚಾರಿಸಿದಾಗ ಸಮಂಜಸವಾದ ಉತ್ತರ ಬರದೆ ಇದ್ದಾಗ ಕಡಂಡಾಮಂಡಲವಾದ ಶಾಸಕ ನಿಖಿಲ್ ಕತ್ತಿ ಬೆಸಿಗೆ ಕಾಲದಲ್ಲಿ ರೈತರ ಜಮಿನುಗಳಿಗೆ ನೀರು ನಿಡದಿದ್ದರೆ ಏನು ಪ್ರಯೋಜನ ಇದೆ ರೀತಿ ಮುಂದುವರೆದರೆ ಅಧಿಕಾರಗಳನ್ನು ಸಸ್ಪೆಂಡ ಮಾಡಲಾಗುವದು ಎಂದು ಏರು ದ್ವನಿಯಲ್ಲಿ ಉಚ್ಚರಿಸಿದರ.
ವೇದಿಕೆ ಮೇಲೆ ತಹಸಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧುಕಾರಿ ಟಿ ಆರ್ ಮಲ್ಲಾಡದ ಉಪಸ್ಥಿತರಿದ್ದರು.
ಬೆಳಗಾವಿ ರಜನಲ್ ಕಮಿಷನರ ರವರ ಆದೇಶದಂತೆ ನೀರು ಬಿಡುಗಡೆ ಹೊಂದುತ್ತದೆ ಆದರೆ ಈ ಭಾರಿ ಕೇವಲ ಹತ್ತು ದಿನ ನೀರು ಬಿಡುಗಡೆ ಯಾಗಿದ್ದರಿಂದ ಕೋನೆಯ ವರೆಗೂ ನೀರು ತಲುಪುವದು ಕಷ್ಟ ಹಾಗೂ ಮದ್ಯದಲ್ಲಿ ರೈತರು ಕೇನಾಲುಗಳಲ್ಲಿ ಮಣ್ಣು ತುಂಬಿ ನೀರು ಮುಂದೆ ಹೋಗದಂತೆ ತಡೆ ಹಿಡಿಯುತ್ತಾರೆ ಎಂದು ಅಧಿಕಾರಿಗಳ ವಾದವಾಗಿದೆ.

Tags:

error: Content is protected !!