ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಮಹಾಲಕ್ಷ್ಮಿ ದ್ಯಾಮವ್ವಾ ನೂತನ ಮೂರ್ತಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡರು.

ಬಸ್ತವಾಡ ಸೀಮೆ ಲಗಮವ್ವಾ ದೇವಸ್ಥಾನದಿಂದ ವಾದ್ಯಮೇಳ ದೊಂದಿಗೆ ಸಾವಿರಾರು ಮಹಿಳೆಯರು ಕುಂಭ ಮೇಳದೊಂದಿಗೆ ಶ್ರೀಗಾಂರ ಗೊಂಡ ದೇವಿಯ ಮೂರ್ತಿ ಮದಮಕ್ಕನಾಳ ಗ್ರಾಮಕ್ಕೆ ಆಗಮಿಸಿತು.

ಗ್ರಾಮದ ಹಿರಿಯರಾದ ಮಲ್ಲಪ್ಪ ಬಡಿಗೇರ ಮಾತನಾಡಿ ಕಳೆದ ನೂರಾರು ವರ್ಷದ ಇತಿಹಾಸ ವಿರುವ ಮಹಾಲಕ್ಷ್ಮಿ ದ್ಯಾಮವ್ವಾ ದೇವಿಯ ಮಂದಿರದಲ್ಲಿ ಮೂರ್ತಿ ಇಲ್ಲದೆ ಪೂಜೆ ನೆರವೆರಿಸಲಾಗುತ್ತಿತ್ತು ,ಊರಿನ ಹಿರಿಯರು ಸೇರಿ ನೂತನ ಮೂರ್ತಿ ನಿರ್ಮಾಣ ಮಾಡಿ ಇಂದು ಗ್ರಾಮಕ್ಕೆ ಬರಮಾಡಿಕೋಳ್ಳಲಾಗಿದೆ ಈ ದಿನ ನಮ್ಮ ಗ್ರಾಮ ಸುವರ್ಣಾಕ್ಷರಗಳಿಂದ ಬರೆದ ದಿನವಾಗಿದೆ ಎಂದರು
ಯುವಕರು ಬಂಢಾರದಲ್ಲಿ ಮಿಂದು ಮೆರವಣೆಗೆಯಲ್ಲಿ ಭಾಗವಹ೮ಸಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು.
ಶಿಕ್ಷಕ ಕೆ ಎಸ್ ಪಾಟೀಲ ಮಾತನಾಡಿ ಹಿರಣ್ಯಕೇಶಿ ನದಿ ದಡದಲ್ಲಿರುವ ಮದಮಕ್ಕನಾಳ ಗ್ರಾಮದಲ್ಲಿ ಹಲವಾರು ದೇವರ ದೇವಸ್ಥಾನಗಳು ಇವೆ ಆದರೆ ಮಹಾಲಕ್ಷ್ಮಿ ದ್ಯಾಮವ್ವಾ ಮಂದಿರವನ್ನು ಇತ್ತೀಚಿಗೆ ಗ್ರಾಮದ ಹಿರಿಯರು ನಿರ್ಮಿಸಿದ್ದಾರೆ ಇಂದು ನೂತನ ಮೂರ್ತಿ ಯನ್ನು ಗ್ರಾಮಸ್ಥರು ಹಬ್ಬದ ಸಡಗರ ದೊಂದಿಗೆ ಅತಿ ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಮಲ್ಲಪ್ಪ ಬಡಿಗೇರ, ಕೆ ಎಸ್ ಪಾಟೀಲ , ನಿವೃತ್ತ ಅಭಿಯಂತರ ಎಸ್ ಕೆ ಪಾಟೀಲ, ಬಸಯ್ಯಾ ಹಿರೇಮಠ , ರಾಜು ತೇರಣಿ ಮತ್ತು
ಮಹಾಲಕ್ಷ್ಮಿ ದ್ಯಾಮವ್ವಾ ಮೂರ್ತಿ ಪ್ರತಿಷ್ಟಾಪನೆ ಸಮಿತಿ ಹಾಗೂ ಮದಮಕ್ಕನಾಳ ಗ್ರಾಮದ ಹಿರಿಯರು,ಯುವಕರು,ಮಹಿಳೆಯರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ದಿನ ನಾಡಿನ ಹರಗುರು ಚರ ಮೂರ್ತಿಗಳ ಸಾನಿಧ್ಯದಲ್ಲಿ ಮೂರ್ತಿ ಪ್ರತಿಷ್ಟಾಪನೆ ಗೋಳ್ಳಲಿದೆ.
