• ನಾಯಿ ಸಾವು ಬೆನ್ನಲ್ಲೇ ವೃದ್ಧ ದಂಪತಿ ಮೇಲೆ ಹಲ್ಲೆ
• ಕೇದನೂರ ಗ್ರಾಮದಲ್ಲಿ ಅಮಾನವೀಯ ಘಟನೆ
• ವೃದ್ಧೆಯ ಕೈ ಮುರಿದ ಪಾಪಿ ನೆರೆಮನೆಯವರು
• ನ್ಯಾಯಕ್ಕಾಗಿ ಪೊಲೀಸ್ ಕಮಿಷನರ್ ಮೊರೆ ಹೋದ ಸಂತ್ರಸ್ತರು

ನಾಯಿ ತೀರಿ ಹೋಗಲೂ ನೀವೇ ಕಾರಣ ಎಂದು ಪಕ್ಕದ ಮನೆಯ ವೃದ್ಧೆ ಮತ್ತು ವೃದ್ಧನ ಮೇಲೆ ಭೀಕರ ಹಲ್ಲೆ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ಕಲ್ಮೇಶ್ವರ ಗಲ್ಲಿಯ ರಹಿವಾಸಿ ಭೈರು ರಾಜಾಯಿ ಮತ್ತು ಶಾಂತಾ ರಾಜಾಯಿ ಅವರು ಹಲ್ಲೆಗೊಳಗಾಗಿದ್ದಾರೆ. ಪಕ್ಕದ ಮನೆಯವರಾದ ನಂದು ಪರಶುರಾಮ ಲಾಡ್ ಮತ್ತು ಸುಗಂಧಾ ಲಾಡ್ ಅವರು ತಮ್ಮ ಸಾಕು ನಾಯಿ ತೀರಿ ಹೋಗಲು ನೀವೇ ಕಾರಣ ಎಂದು ವೃದ್ಧ ದಂಪತಿಯ ಮೇಲೆ ಭೀಕರ ಹಲ್ಲೆ ನಡೆಸಿದ್ದು, ಹಲ್ಲೆಯಲ್ಲಿ ವೃದ್ಧೆಯ ಕೈ ಮುರಿದಿದೆ. ಅಲ್ಲದೇ ವೃದ್ಧ ಭೈರು ರಾಜಾಯಿ ಕೂಡ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯನ್ನು ಕೊಡಿಸಲಾಗಿದ್ದು, ನೌಕರಿಗಾಗಿ ಬೇರೆ ರಾಜ್ಯದಲ್ಲಿರುವ ಅವರ ಮಕ್ಕಳಿಗೆ ವಿಷಯವನ್ನು ಮುಟ್ಟಿಸಲಾಗಿದೆ. ಕೂಡಲೇ ಅವರು ಆಸ್ಪತ್ರೆಗೆ ಬಂದು ಪರಿಶೀಲಿಸಿದ್ದು, ಕಾಕತಿ ಗ್ರಾಮೀಣ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಗಾಯಗೊಂಡ ಶಾಂತಾ ರಾಜಾಯಿ ಮತ್ತು ಅವರ ಸುಪುತ್ರ ನ್ಯಾಯಕ್ಕಾಗಿ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದ್ದಾರೆ.
