ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿನ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಕಬಳಿಸಲು ಲ್ಯಾಂಡ್ ಮಾಫಿಯಾ ಯತ್ನಿಸುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಬೆಳಗಾವಿ ತಾಲೂಕಿನ ಅಲತಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 87ರ 4 ಎಕರೆ 38 ಗುಂಟೆ ಜಮೀನಿನ ಮೇಲೆ ನಡೆದಿರುವ ಅತಿಕ್ರಮಣದ ವಿರುದ್ಧ ಅಲತಗಾ ಗ್ರಾಮಸ್ಥರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಕಳೆದ ಏಪ್ರಿಲ್ 24, 2026 ರಂದು ಭೂ ನ್ಯಾಯ ಮಂಡಳಿಯು ಈ ಜಮೀನು ಆಲತಗಾ ಗ್ರಾಮಸ್ಥರಿಗೆ ಸೇರಬೇಕೆಂದು ಆದೇಶ ನೀಡಿದೆ. ಆದಾಗ್ಯೂ, ರಾಮೇಶ್ವರ ದೇವಸ್ಥಾನ ಟ್ರಸ್ಟ್ ಹೆಸರಿನಲ್ಲಿ ಕೆಲವು ತಮ್ಮ ಹೆಸರಿನ ಫಲಕ ಅಳವಡಿಸಿದ್ದು, ತಮ್ಮ ಸುಪರ್ದಿಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಟ್ರಸ್ಟ್’ನ ಟ್ರಸ್ಟಿಯಾದ ಗೋವಿಂದ ಕುಲಕರ್ಣಿ ಅವರು 1987 ರಲ್ಲೇ ಬೆಂಗಳೂರಿನ ಹೈಕೋರ್ಟ್ನಲ್ಲಿ ನೀಡಿದ ಜವಾಬ್ದಾರಿಯಂತೆ ಕೆ.ಎಲ್.ಆರ್ ರವರು ಈ ಭೂಮಿ ಗ್ರಾಮಸ್ಥರದ್ದು ಎಂದು ಆದೇಶ ಹೊರಡಿಸಿದ್ದು, ಪ್ರಸ್ತುತ ಟ್ರಸ್ಟ್ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ ಈ ವಿಷಯವನ್ನು ಸೂಕ್ತವಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಚೇತಕ್ ಕಾಂಬಳೆ ಅವರು ಒತ್ತಾಯಿಸಿದ್ದಾರೆ.
ದೇವಸ್ಥಾನ ಪಂಚ ಕಮಿಟಿಯ ಚೇರ್ಮನ್ ಚಂದ್ರಕಾಂತ್ ಧುಡುಮ್, “ಕಳೆದ 100 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಜಮೀನು ದೇವಸ್ಥಾನದ ಪಂಚ ಕಮೀಟಿಯ ಸುಪರ್ದಿಯಲ್ಲಿದೆ. ಪ್ರಕರಣವು ನ್ಯಾಯಾಲಯದಲ್ಲಿದ್ದರೂ ಬೆಳಗಾವಿಯ ಅಭಿಜೀತ್ ಭಾತಕಾಂಡೆ ಎಂಬುವವರು ತಮಗೆ ಜಿಪಿಎ ಆಗಿದೆ ಎಂದು ಹೇಳಿ ಅಕ್ರಮವಾಗಿ ಬೋರ್ಡ್ಗಳನ್ನು ಅಳವಡಿಸಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ” ಎಂದು ದೂರಿದ್ದಾರೆ. ಇತ್ತೀಚೆಗೆ ರಾಜಾಯಿ ಎಂಬುವವರ ಹೆಸರು ದಾಖಲೆಗಳಿಂದ ಡಿಲೀಟ್ ಆಗಿ ಕೇವಲ ರಾಮೇಶ್ವರ ದೇವಸ್ಥಾನದ ಹೆಸರು ಮಾತ್ರ ಉಳಿದಿದೆ. ದೇವಸ್ಥಾನದ ಪೂಜಾರಿಗಳೇ ಈ ಜಮೀನು ಗ್ರಾಮಸ್ಥರಿಗೆ ಸೇರಿದ್ದೆಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವಾಗ, ಹೊರಗಿನವರು ಬಂದು ದಾದಾಗಿರಿ ನಡೆಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಅಕ್ರಮವಾಗಿ ಹಾಕಿರುವ ಬೋರ್ಡ್ಗಳನ್ನು ತಕ್ಷಣವೇ ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪೀರಾಜಿ ಪಾವಶೆ, ಅಶೋಕ್ ಘುಗ್ರೇಟಕರ್, ಕಲ್ಲಪ್ಪ ಚೌಗುಲೆ, ರಮೇಶ್ ಪಾಟೀಲ್, ಬಾಳು ಪಾಟೀಲ್, ಪುಂಡಲೀಕ ಪಾಟೀಲ್, ಉಮೇಶ್ ಚೌಗುಲೆ, ಅನೀಲ್ ಪಾವಶೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
