ಧಾರವಾಡ- ಮನೆ ನಿರ್ಮಿಸಲು ತೆಗೆಯಾಗಿದ್ದ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಸಾವನಪ್ಪಿದ್ದ ಘಟನೆ, ಧಾರವಾಡದ ಮನಸೂರು ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಸಂಭವಿಸಿದೆ.

ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕುಮಾರ ನಿಂಗಪ್ಪ ಮುದ್ದಕಣ್ಣವರ (7), ಪ್ರಥಮ(7)ಮೃತ ಮಕ್ಕಳಾಗಿದ್ದಾರೆ.

ಮಕ್ಕಳಿಬ್ಬರು ಆಟವಾಡಲು ನಿವಾಸದ ಮನೆಯಿಂದ ಆಚ್ಚೆ ಹೋಗಿದ್ದರು. ಆದರೆ ತಡ ಸಂಜೆಯಾದ್ರೂ ಇಬ್ಬರೂ ಬಾಲಕರು ಮನೆ ಬಂದಿರಲಿಲ್ಲ. ಆತಂಕಗೊಂಡ ಮಕ್ಕಳ ಪೋಷಕರು ಇಬ್ಬರು ಬಾಲಕರನ್ನು ಹುಡುಕಲು ಮುಂದಾಗಿದ್ದಾರೆ. ನಾಲ್ಕೈದು ತಾಸು ಹುಡುಕಾಟ ನಡೆಸಿದ ಬಳಿಕ, ಹತ್ತರದಲ್ಲಿ ನಿರ್ಮಿಸಲಾಗುತ್ತಿದ್ದ ಮನೆ ನೀರಿನ ಗುಂಡಿಯಲ್ಲಿ ಇಬ್ಬರು ಯುವಕರು ಶವವಾಗಿ ಪತ್ತೆಯಾಗಿದ್ದಾರೆ.
ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದರಿಂದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಇನ್ನೂ ಪ್ರಥಮ ಧಾರವಾಡ ಸತ್ತೂರು ಗ್ರಾಮದ ನಿವಾಸಿಯಾಗಿದ್ದು, ಶಾಲೆಗಳ ರಜೆ ಹಿನ್ನಲೆಯಲ್ಲಿ ಮಾವನ ಮನೆಗೆ ರಜೆಗೆ ತೆರಳಿ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
