Belagavi

ಬೆಳಗಾವಿಯಲ್ಲಿ ಹಳೇ ವೈಷಮ್ಯಕ್ಕೆ ಮೂವರು ಯುವಕರ ಮೇಲೆ ತಲ್ವಾರಿನಿಂದ ಭೀಕರ ಹಲ್ಲೆ

Share

• ಅಮನ್ ನಗರದಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ.
• ವಲಿ, ಇಮಾಮ್, ಮಜೀದ್ ಶೇಖ್‌ಗೆ ಗಂಭೀರ ಗಾಯ.
• ಬಿಮ್ಸ್ ಆಸ್ಪತ್ರೆಗೆ ಗಾಯಾಳುಗಳ ದಾಖಲು, ಚಿಕಿತ್ಸೆ.
• ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಬೆಳಗಾವಿಯಲ್ಲಿ ಹಳೇ ವೈಷಮ್ಯದ ಕಿಚ್ಚು ಮತ್ತೆ ಸ್ಫೋಟಗೊಂಡಿದೆ. ನಗರದ ಅಮನ್ ನಗರದಲ್ಲಿ ಕಿಡಿಗೇಡಿಗಳು ಮೂವರು ಯುವಕರ ಮೇಲೆ ತಲ್ವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆಯಿಂದ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿಯ ಅಮನ್ ನಗರ ನಿವಾಸಿಗಳಾದ ವಲಿ ಶೇಖ್, ಇಮಾಮ್ ಶೇಖ್ ಹಾಗೂ ಮಜೀದ್ ಶೇಖ್ ಎಂಬುವವರ ಮೇಲೆ ಮಂಗಳವಾರ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಹಳೆಯ ವೈಷಮ್ಯವೇ ಈ ಕೃತ್ಯಕ್ಕೆ ಪ್ರಚೋದನೆ ನೀಡಿದ್ದು, ದಾಳಿಕೋರರು ತಲ್ವಾರಿನಿಂದ ಅಟ್ಟಹಾಸ ಮೆರೆದಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೂವರು ಯುವಕರನ್ನು ಕೂಡಲೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ವಿಷಯ ತಿಳಿದ ತಕ್ಷಣ ಮಾಳಮಾರುತಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಗಾಯಾಳುಗಳಿಂದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಾಗಿದೆ.

Tags:

error: Content is protected !!