Belagavi

ಬೆಳಗಾವಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಅಕ್ರಮ ಸರಾಯಿ ಹಾಗೂ ಮಾವಾ ಮಾರಾಟಗಾರರ ಬಂಧನ

Share

• ಕ್ಯಾಂಪ್ ಪೊಲೀಸರಿಂದ ಅಕ್ರಮ ಸರಾಯಿ ಜಪ್ತಿ
• ಖಡೇಬಜಾರ ಪೊಲೀಸರಿಂದ ಮಾವಾ ಮಾರಾಟಗಾರನ ಬಂಧನ
• ರುಕ್ಕಿಣಿ ಎ, ಆನಂದ ಆದಗೊಂಡರಿಂದ ದಾಳಿ
• ಪಡ್ಡು ಕುಡಾಲೆ, ಪಾಂಡು ಪೂಜಾರಿ ಅರೆಸ್ಟ್
ಬೆಳಗಾವಿ ನಗರದ ಕ್ಯಾಂಪ್ ಮತ್ತು ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳಭಟ್ಟಿ ಸರಾಯಿ ಹಾಗೂ ನಿಷೇಧಿತ ಮಾವಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಕ್ಯಾಂಪ್ ಅಸದಖಾನ ದರ್ಗಾ ಹತ್ತಿರ ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಗಣೇಶಪುರದ ಪಡ್ಡು ರಾಜಾರಾಮ ಕುಡಾಲೆ ಎಂಬಾತನನ್ನು ಪಿಎಸ್‌ಐ ಶ್ರೀಮತಿ ರುಕ್ಕಿಣಿ ಎ. ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಆರೋಪಿಯಿಂದ 10 ಲೀಟರ್ ಸರಾಯಿ ಹಾಗೂ ನಗದು ಜಪ್ತಿ ಮಾಡಲಾಗಿದೆ. ಇನ್ನೊಂದು ಕಾರ್ಯಾಚರಣೆಯಲ್ಲಿ, ರೇಲ್ವೆ ಸ್ಟೇಶನ್ ಕ್ರಾಸ್ ಬಳಿ ಜೀವಕ್ಕೆ ಹಾನಿಕಾರಕವಾದ ಮಾವಾ ಪಾಕೀಟುಗಳನ್ನು ಮಾರಾಟ ಮಾಡುತ್ತಿದ್ದ ಕೊನವಾಳ ಗಲ್ಲಿಯ ಪಾಂಡು ಮಂಜಪ್ಪ ಪೂಜಾರಿ ಎಂಬಾತನನ್ನು ಖಡೇಬಜಾರ ಪಿಎಸ್‌ಐ ಶ್ರೀ ಆನಂದ ಆದಗೊಂಡ ಮತ್ತು ತಂಡ ಬಂಧಿಸಿದೆ. ಬಂಧಿತರಿಂದ 20 ಮಾವಾ ಪಾಕೀಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳ ಈ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಶ್ಲಾಘಿಸಿದ್ದಾರೆ.

Tags:

error: Content is protected !!