Dharwad

ಧಾರವಾಡದ ಬೆಳ್ಳಿಗಟ್ಟಿ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ಶ್ರೀ ಬಸವಣ್ಣ ರಥೋತ್ಸವ…

Share

ಪ್ರತಿ ವರ್ಷದಂತೆ ಪ್ರಸಕ್ತ ವರ್ಷದ ಧಾರವಾಡದ ಬೆಳ್ಳಿಗಟ್ಟಿ ಗ್ರಾಮದಲ್ಲಿನ ಶ್ರೀ ಬಸವಣ್ಣ ಜಾತ್ರಾ ಮಹೋತ್ಸ ಹಾಗೂ ರಥೋತ್ಸವವು ಅದ್ಧೂರಿಯಾಗಿ ನಡೆಯಿತು. ‌ಭಕ್ತಿ ಭಾವದೊಂದಿಗೆ ಗ್ರಾಮಸ್ಥರು ಸೇರಿ ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ಭಕ್ತರು ಬಸವಣ್ಣ ಮೂರ್ತಿಗೆ ವಿಶೇಷ ಪೂಜೆ ಮಾಡಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.‌

ಧಾರವಾಡ ತಾಲ್ಲೂಕಿನ ಬೆಳ್ಳೆಗಟ್ಟಿ ಗ್ರಾಮದಲ್ಲಿ ಕಳೆದ ಸೋಮವಾರ ಶ್ರೀ ಬಸವಣ್ಣ ಜಾತ್ರಾ ಮಹೋತ್ಸ ಸಂಭ್ರಮ ಕಳೆಗಟ್ಟಿತ್ತು. ಮುಂಜಾನೆಯಿಂದಲೇ ಗ್ರಾಮಸ್ಥರೆಲ್ಲರು ಗುಡ್ಡದ ಶ್ರೀ ಬಸವಣ್ಣ ದೆವಸ್ಥಾನಕ್ಕೆ ತೆರಳಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡು ಬಂದಿದ್ದು, ಬಳಿಕ ಗ್ರಾಮದ ಹಿರಿಯರು ಶ್ರೀ ಗುಡ್ಡದ ಬಸವಣ್ಣ ಮಂದಿರಕ್ಕೆ ಪಾಲಿಕೆ ತೆಗೆದುಕೊಂಡು ಪೂಜೆ ಸಲ್ಲಿಸಿಕೊಂಡು ಬಂದು ರಥದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಸಂಜೆ ಅಧಿಕೃತವಾಗಿ ಚಾಲನೆ ನೀಡಿದರು. ‌ರಥೋತ್ಸವದಲ್ಲಿ ಭಾಗಿಯಾದ ಸಹಸ್ರಾರು ಭಕ್ತರು ರಥದಲ್ಲಿರುವ ಬಸವಣ್ಣ ಮೂರ್ತಿಗೆ ಪೂಜೆ ಮಾಡಿಸಿ ಬಸವಣ್ಣನ ಕೃಪೆಗೆ ಪಾತ್ರರಾದರು. ಗ್ರಾಮದ ದ್ಯಾಮವ್ವ ಮಂದಿರದಿಂದ ರಥೋತ್ಸವ ಜರುಗಿದ್ದು, ಭಕ್ತಿ ಭಾವದೊಂದಿಗೆ ಗ್ರಾಮಸ್ಥರು ಬಸವಣ್ಣ ಜಾತ್ರೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಇನ್ನೂ ರಥೋತ್ಸ ಮುಂಭಾಗದಲ್ಲಿ ಭಜನಾ ಮಂಡಳಿಯ ಭಕ್ತಿ ಗೀತೆಗಳು ಹಾಗೂ ಕರಡಿ ಮಜಲು ನೋಡುಗರ ಭಕ್ತಿ ಮತ್ತಷ್ಟು ಹೆಚ್ಚಿಸಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದ ಶ್ರೀ ಬಸವಣ್ಣ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿದೆ.

Tags:

error: Content is protected !!