• ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ
• ದಕ್ಷಿಣದ ರಾಜ್ಯಗಳಿಗೆ ಬಿಜೆಪಿ ಅನ್ಯಾಯ
• ಮೋದಿ ಮಾಡುವುದು ಬರೀ ರಾಜಕೀಯ
• ಕ್ಷೇತ್ರ ವಿಂಗಡಣೆ ಅಸ್ತ್ರಕ್ಕೆ ಆಕ್ರೋಶ

ಮಹಿಳಾ ಮೀಸಲಾತಿ ಜಾರಿಯ ನೆಪದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಕ್ಷೇತ್ರ ವಿಂಗಡಣೆಯ ಮೂಲಕ ದಕ್ಷಿಣದ ಶಕ್ತಿ ಕುಂದಿಸಲು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ, ಬದಲಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ತಂದಿದ್ದೇ ರಾಜೀವ್ ಗಾಂಧಿ ಎಂದು ಸಿದ್ದರಾಮಯ್ಯ ಸ್ಮರಿಸಿದರು. “ಬಿಜೆಪಿ ಈಗ ಕ್ಷೇತ್ರ ವಿಂಗಡಣೆಯ ಷರತ್ತು ವಿಧಿಸಿದೆ. ಇದರಿಂದ ಉತ್ತರ ಭಾರತದಲ್ಲಿ ಲೋಕಸಭಾ ಸ್ಥಾನಗಳು ಹೆಚ್ಚಾಗಿ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮೋದಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ. ನಿಜವಾದ ಕಾಳಜಿ ಇದ್ದರೆ 2023ರಲ್ಲೇ ಇದನ್ನು ಜಾರಿಗೆ ತರಲಿ,” ಎಂದು ಸವಾಲು ಹಾಕಿದರು.
ವಿನಇದೇ ವೇಳೆ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿರುವ ವಿಚಾರವಾಗಿ ಮಾತನಾಡಿದ ಸಿಎಂ, “ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ, ಅದು ಕಾನೂನಾತ್ಮಕ ಪ್ರಕ್ರಿಯೆ,” ಎಂದು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ತಂದ ಇತಿಹಾಸವೇ ಇಲ್ಲದ ಬಿಜೆಪಿ, ಈಗ ಮೊಸಳ ಕಣ್ಣೀರು ಸುರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
