State

ಮಹಿಳಾ ಮೀಸಲಾತಿ ಕೇವಲ ಬಿಜೆಪಿ ಆಸ್ತಿಯಲ್ಲ: ಕೇಂದ್ರದ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗು!

Share

• ಮಹಿಳಾ ಮೀಸಲಾತಿ ಕಾಂಗ್ರೆಸ್‌ನಿಂದ ಪೂರ್ಣ ಬೆಂಬಲ
• ಚುನಾವಣೆ ಲಾಭಕ್ಕಾಗಿ ಬಿಜೆಪಿ ಗಿಮಿಕ್: ಡಿಸಿಎಂ ಕಿಡಿ
• ದಕ್ಷಿಣ ಭಾರತಕ್ಕೆ ಅನ್ಯಾಯವಾದರೆ ಸಹಿಸಲ್ಲ
• ಮಹಿಳಾ ಮೀಸಲಾತಿ ದೇಶದ ಆಸ್ತಿ, ಬಿಜೆಪಿಯದ್ದಲ್ಲ!

ಮಹಿಳಾ ಮೀಸಲಾತಿ ವಿಧೇಯಕದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬೆಂಬಲಿಸುತ್ತದೆ, ಆದರೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಮಹಿಳಾ ಮೀಸಲಾತಿ ವಿಧೇಯಕವು ದೇಶದ ಆಸ್ತಿಯೇ ಹೊರತು ಅದು ಕೇವಲ ಬಿಜೆಪಿಯ ಆಸ್ತಿಯಲ್ಲ ಎಂದು ಕಿಡಿಕಾರಿದರು. “ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 50 ರಷ್ಟು ಮೀಸಲಾತಿ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದರು. ಈ ವಿಧೇಯಕ ಈ ಹಿಂದೆಯೇ ರಾಜ್ಯಸಭೆಯಲ್ಲಿ ಪಾಸಾಗಿತ್ತು. ಆದರೆ ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಇದನ್ನು ಜಾರಿ ಮಾಡಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳಾ ಮೀಸಲಾತಿ ಜಾರಿಯ ಸಂದರ್ಭದಲ್ಲಿ ಉತ್ತರ ಭಾರತಕ್ಕೆ ಹೆಚ್ಚು ಮತ್ತು ದಕ್ಷಿಣ ಭಾರತಕ್ಕೆ ಕಡಿಮೆ ಎಂಬ ತಾರತಮ್ಯದ ನಿಯಮವನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಡಿಸಿಎಂ ಎಚ್ಚರಿಸಿದರು. ಕಾಂಗ್ರೆಸ್ ಪಕ್ಷ ಮತ್ತು ‘ಇಂಡಿಯಾ’ ಒಕ್ಕೂಟವು ಯಾವಾಗಲೂ ಮಹಿಳೆಯರ ಪರವಾಗಿ ನಿಂತಿದೆ. ನಾವು ಮಹಿಳಾ ವಿರೋಧಿಗಳಲ್ಲ, ಬಿಜೆಪಿಯವರೇ ಮಹಿಳಾ ವಿರೋಧಿಗಳು ಎಂದು ತಿರುಗೇಟು ನೀಡಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಂದು ನಿರ್ಧಾರವೂ ಸೂಕ್ತ ಚರ್ಚೆಯ ಮೂಲಕ ನಡೆಯಬೇಕು. ಅರ್ಜೆಂಟಾಗಿ ವಿಧೇಯಕ ತರುತ್ತಿರುವ ಕೇಂದ್ರದ ಕ್ರಮದಿಂದ ಅವಮಾನವಾಗಿರುವುದು ನಮಗಲ್ಲ, ಅವರಿಗೆ ಎಂದು ಕುಟುಕಿದರು.

Tags:

error: Content is protected !!