Belagavi

ಬೆಳಗಾವಿಯಲ್ಲಿ ಸಾಮರಸ್ಯದ ಸಂಗಮ: ದಲಿತ ಸಂಘರ್ಷ ಸಮಿತಿಯಿಂದ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಬಸವಣ್ಣನವರ ಜಯಂತಿ ಆಚರಣೆ

Share

• ಬೆಳಗಾವಿಯಲ್ಲಿ ಮಹನೀಯರ ಜಯಂತಿಗಳ ಭವ್ಯ ಆಚರಣೆ
• ಸಂಘರ್ಷ ಸಮಿತಿಯಿಂದ ಭಾವೈಕ್ಯತೆಯ ಸಂದೇಶ ರವಾನೆ
• ಮಹನೀಯರ ದಾರಿಯಲ್ಲಿ ನಡೆಯಲು ಗಣ್ಯರ ಕರೆ
• ಯುವ ಪೀಳಿಗೆಗೆ ಪ್ರೇರಣೆಯಾದ ಮಹಾನ್ ಚೇತನಗಳು

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮತ್ತು ಜೈ ಭೀಮ್ ಯುವಕ ಮಂಡಳದ ವತಿಯಿಂದ ಛತ್ರಪತಿ ಶಿವಾಜೀ ಮಹಾರಾಜರು ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.

ಇಂದು ಬೆಳಗಾವಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮತ್ತು ಜೈ ಭೀಮ್ ಯುವಕ ಮಂಡಳದ ವತಿಯಿಂದ ಛತ್ರಪತಿ ಶಿವಾಜೀ ಮಹಾರಾಜರು ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ದಲಿತ ಮುಖಂಡ ಮಲ್ಲೇಶ್ ಚೌಗಲೆ ಅವರು, ಈ ಬಾರಿ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಛತ್ರಪತಿ ಶಿವಾಜೀ ಮಹಾರಾಜರು, ಜಗಜ್ಯೋತಿ ಬಸವೇಶ್ವರರು ಮತ್ತು ಭಗವಾನ್ ಬುದ್ಧರ ಜಯಂತಿಯನ್ನು ಈ ಬಾರಿ ಒಂದೇ ಸಮಯದಲ್ಲಿ ಆಚರಿಸಲಾಗುತ್ತಿದೆ. ಅವರು ತೋರಿಸಿದ ದಾರಿಯಲ್ಲಿ ನಾವು ನಡೆಯುತ್ತಿದ್ದು, ಇದು ಭಾವಿ ಪೀಳಿಗೆಗೆ ಪ್ರೇರಣೆಯಾಗಬೇಕು. ಭವಿಷ್ಯದಲ್ಲಿ ಅವರ ಆಚಾರ ವಿಚಾರಗಳಲ್ಲಿ ಈ ದೇಶ ನಡೆಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ರಾಯಿ ಮೇತ್ರಿ, ಬಾಬು ಸುಳೇಭಾವಿ, ಗಜಾನನ ಸುಳಗೇಕರ, ಭಾವಕಣ್ಣಾ ಪೀರಗಾಣೆ, ಸಂತೋಷ ಚೌಗಲೆ, ಸಂತೋಷ್ ಹಲಗೇಕರ, ರವಿ ಕಾಂಬಳೆ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!