Agriculture

ಯಮಕನಮರ್ಡಿ ಯಲ್ಲಿ ವಿಶಿಷ್ಟ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.

Share

ಜಾತ್ರೆಗಳಲ್ಲಿ ಮಾತ್ರ ಎತ್ತು ಹಾಗೂ ಕುದುರೆಗಳ ಶರ್ಯತ್ತು ಆಯೋಜನೆ ಮಾಡುವದು ಕಾಮನ್ ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದಲ್ಲಿ ಎತ್ತು ಹಾಗೂ ಕುದುರೆಗಳ ಶರ್ಯತ್ತು ಆಯೋಜನೆ ಮಾಡುವದರ ಮೂಲಕ ವಿಶೇಷವಾಗಿ ಅಂಬೇಡ್ಕರ ಜಯಂತಿ ಆಚರಿಸಿದರು.

ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದಲ್ಲಿ ಜಾತ್ರೆಗಳ ಮಾದರಿಯಲ್ಲಿ ಕುದುರೆ, ಎತ್ತುಗಳ ಶರ್ಯತ್ತು ಆಯೋಜಿಸಿ ಯುವಕರು ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದರು.
ಡಾಲ್ಬಿ ಹಚ್ಚಿ ಮೆರವಣಿಗೆ ಮಾಡದೇ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು. ಎತ್ತು ಹಾಗೂ ಕುದುರೆಗಳ ರೇಸ್ ನೋಡಲು ನೂರಾರು ಯುವಕರು ಭಾಗಿಯಾಗಿದ್ದರು‌.

ಹಳ್ಳಿ ಸೊಗಡು ಹಾಗೂ ಗ್ರಾಮೀಣ ಕ್ರೀಡೆಗಳನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶರ್ಯತ್ತುಗಳನ್ನ ಆಯೋಜನೆ ಮಾಡಿ ಯಮಕನಮರ್ಡಿ ನಗರದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಆಚರಿಸಿದರು.

Tags:

error: Content is protected !!