ಕಾಂಗ್ರೆಸ್ ನಾಯಕರ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು, ಎಲ್ಲರು ಸಚಿವಸ್ಥಾನದ ಆಕಾಂಕ್ಷಿಗಳಿದ್ದಾರೆ, ಅವರು ಸಚಿವರಾಗಬೇಕು ಎನ್ನವುದರಲ್ಲಿ ತಪ್ಪಿಲ್ಲವೆಂದು ಹೇಳಿದ್ದಾರೆ.

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಕೇಳುವವರಲ್ಲಿ ಮೊದಲ ಬಾರಿ ಎರಡನೇ ಬಾರಿ ಆಯ್ಕೆ ಆಗಿದ್ದಾರೆ ಅನ್ನುವುದು ವಿಚಾರವಲ್ಲ. ಎಲ್ಲರಿಗೂ ಸಚಿವಾರಗೋ ಅರ್ಹತೆ ಇದೆ. ಎಲ್ಲರೂ ಸಚಿವರಾಗಬೇಕು ಅಂದುಕೊಳ್ಳುವುದು ತಪ್ಪಲ್ಲ. ಪಾರ್ಟಿ ಪ್ರೋಟೋಕಾಲ್ ಅನುಸರಿಸುವುದು ತುಂಬಾ ಮುಖ್ಯವಾಗುತ್ತದೆ. ಎಲ್ಲರಿಗೂ ಹೈಕಮಾಂಡ ಭೇಟಿ ಮಾಡಿ, ತಮ್ಮ ಬಯಕೆ ಹೇಳಿಕೊಳ್ಳುವ ಅವಕಾಶವಿದೆ. ಸಚಿವಾಕಾಂಕ್ಷಿಗಳ ನಡೆಯನ್ನು ನಾನು ಸ್ವಾಗತ್ತಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರ ದೆಹಲಿ ಟೂರನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಮಹಿಳಾ ಮಿಸಲಾತಿ ಮಸೂದೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ನಾವು ಕೇಂದ್ರದಲ್ಲಿದ್ದಾಗ ಲೋಕಸಭೆಯಲ್ಲಿ ನಾವು ಬಿಲ್ ಪಾಸ್ ಮಾಡಿದ್ದೆವು, ರಾಜ್ಯ ಸಭೆಯಲ್ಲೂ ಬಿಲ್ ಪಾಸ್ ಯತ್ನಿಸಿದ್ದೆವು, ಸಂಖ್ಯಾಬಲ ಕೊರತೆ ಇತ್ತು.
ಈಗ ಪ್ರಧಾನಿ ಮೋದಿ ವಿಶ್ವಗುರು ಎಂದು ಕರೆಯಿಸಿಕೊಳ್ಳವವರು ಅಧಿಕಾರಕ್ಕೆ ಬಂದು 12 ವರ್ಷವಾಗಿದೆ. ಪ್ರಧಾನಿ ಗಳು ಮಹಿಳಾ ಮಿಸಲಾತಿ ಬಗ್ಗೆ 12 ವರ್ಷದಿಂದ ಮಾತಾಡಿಲ್ಲ. ಈಗ ಮಹಿಳಾ ಮೀಸಲಾತಿ ಜಾರಿಗೆ ತರಲು ಹೊರಟ್ಟಿದ್ದಾರೆ, ಅವರಲ್ಲಿಯೇ ಇದರ ಬಗ್ಗೆ ಗೊಂದಲವಿದೆ. ಡಿಲಿಮಿಟೇಶನ್ ನಲ್ಲಿ ಗೊಂದಲಗಳಿವೆ. ನಾನು ಬಿಲ್ನ್ನು ಸ್ವಾಗತ ಮಾಡುತ್ತೇನೆ. ಆದರೆ ವಿಷಯವನ್ನು ತಿರುಚುವಲ್ಲಿ ಬೆಜೆಪಿಗರು ನಿಸ್ಸೀಮರು, ದೇಶಕ್ಕೆ ಬೆಂಕಿ ಹತ್ತಿದಾಗ ಇವರು ಡ್ಯಾನ್ಸ್ ಮಾಡುತ್ತಾರೆ.
ತರ್ಕ ಬದ್ದವಾದ ವಿಚಾರ ಮಾತನಾಡಬೇಕು ಎಂದರು. ಜತೆಗೆ ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಿಚಾರದಲ್ಲಿ ಟ್ರಂಪ್ ಅವರಿಂದ ಪ್ರಪಂಚಕ್ಕೆ ಅನಾನೂಕೂಲವಾಗಿದೆ. ನಮ್ಮ ನಿಲುವುಗಳು ದೃಢವಾಗಿರಬೇಕು. ನಮ್ಮ ದೇಶಕ್ಕೆ ಅನೂಕೂಲವಾಗೋ ದೇಶಗಳ ಜೊತೆ ವ್ಯವಹಾರ ಮಾಡಬೇಕು. ಪ್ರಧಾನಿ ಇಸ್ರೇಲ್ ಜೊತೆ ಗುರುತಿಸಿಕೊಂಡಿದ್ದು ಸರಿಯಲ್ಲ ಎಂದು ಕುಟುಕಿದರು. ಧಾರವಾಡದ ಕಾಂಗ್ರೆಸ್ ಮುಖಂಡ ಫೈರೋಜ ಹತ್ಯೆಯ ಬಳಿಕ ಫೈರೋಜ್ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ನಡುವಿನ ಆಡಿಯೋದಲ್ಲಿ ಜಮ್ಮೀರ ಹಾಗೂ ಸಂತೋಷ ಲಾಡ್ ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಎಂಬ ಆಡಿಯೋ ವೈರಲ್ ವಿಚಾರಕ್ಕೆ ಮಾತನಾಡಿ, ನಾನು ಆಡಿಯೋ ಕೇಳಿಸಿಕೊಂಡಿಲ್ಲ. ಆ ರೀತಿ ಹೇಳಿದ್ದಾರೆ ಅಂದರೆ ಇಸ್ಮಾಯಿಲ್ ತಮಟಗಾರರನ್ನೇ ಕೇಳಿ. ನಾವು ಹೇಗೆ ಬಳಸಿಕೊಂಡಿದ್ದೇವೆ ಅವರನ್ನೇ ಕೇಳಿ, ನಮ್ದು ಬೇರೆ ಕ್ಷೇತ್ರ ಅವರದು ಬೇರೆ ಕ್ಷೇತ್ರ. ಅವರೇ ನಮ್ಮ ಪಾರ್ಟಿಗೆ ಸೇರಿದ್ದು, ಎಲ್ಲರೂ ಸೇರಿ ಪಾರ್ಟಿ ಕೆಲಸ ಮಾಡ್ತಾರೆ. ಆದರೆ ನಾನು ಆಡಿಯೋ ಕೇಳಿಲ್ಲ, ನನಗೆ ಅದರಲ್ಲೇನಿದೆ ಗೊತ್ತಿಲ್ಲ. ವಿಚಾರಣೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಕಮಿಷನರ್ ಅವರು ವಿಚಾರಣೆ ನಡೆಸಿದ್ದಾರೆಂದು ಹೇಳಿದ್ದಾರೆ. ಫೈರೋಜ್ ಹತ್ಯೆ ಘಟನೆ ನಡೆದಿರೋದ ಕೆಟ್ಟ ಸಂಗತಿ, ಇದು ವೈಯಕ್ತಿಕ ಸ್ನೇಹಿತರಲ್ಲಿ ಕೊಲೆ ಆಗಿರೋದು ಕಣ್ತಾಯಿದೆ. ಇದು ಸಮುದಾಯ ಗಲಾಟೆ ಅಲ್ಲ. ಸ್ನೇಹಿತರಿಂದಲೇ ನಡೆದಿರುವ ಕೊಲೆ, ಇಂತಹ ಸಂದರ್ಭದಲ್ಲಿ ನಾವೇನು ಮಾಡಬೇಕು ಎಂದು ಪ್ರಶ್ನೆ ಮಾಡಿದರು.
