Dharwad

ಧಾರವಾಡದಲ್ಲಿ ಯಾರದೋ ನಿವಾಸ ಮುಂದೆ ಕಾರ್ ಪಾರ್ಕ್ ಮಾಡುವ ಮುನ್ನ ಇರಲಿ ಎಚ್ಚರ…

Share

ಅನಾಥವಾಗಿ ಮನೆಯೊಂದರ ಮುಂಭಾಗದಲ್ಲಿ ಹಲವು ದಿನಗಳಿಂದ ಪಾರ್ಕ್ ಮಾಡಿದ ಕಾರನ್ನು ಸ್ಥಳೀಯರ ಮಾಹಿತಿ ಮೇರೆಗೆ ಠಾಣೆಗೆ ಕಾರ್‌ನ್ನು ಪೊಲೀಸರು ಎತ್ತಾಕೊಂಡ ಹೋದ ಘಟನೆ ಧಾರವಾಡದಲ್ಲಿಂದು ನಡೆದಿದೆ.

ಹೌದು..ಧಾರವಾಡ ಜಿಲ್ಲಾ ಆಸ್ಪತ್ರೆ ಬಳಿಯ ನಿವೃತ್ತ ಪೊಲೀಸ್ ಕಮಿಷನರ್ ಉಮಾಪತಿಯವರ ನಿವಾಸದ ಮುಂಭಾಗದಲ್ಲಿ, ನಂಬರ್ ಪ್ಲೇಟ್ ಇಲ್ಲದ ಕಾರವೊಂದು ಪಾರ್ಕ್ ಮಾಡಲಾಗಿತ್ತು. ಈಗ ತೆಗೆದುಕೊಂಡು ಹೋಗುತ್ತಾರೆ, ಆಗ ತೆಗೆದುಕೊಂಡು ಹೋಗುತ್ತಾರೆ ಎಂದು ಉಮಾಪತಿಯವರು ಹಾಗೂ ಕುಟುಂಬಸ್ಥರು ಕಾದು ನೋಡಿದ್ದಾರೆ. ಆದರೆ ದಿನಗಳ ಉರುಳುತ್ತಿದ್ದರು, ಕಾರ್ ಮಾಲೀಕರು ತೆಗೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಅನಾಮಾನಗೊಂಡ ನಿವಾಸದವರು ಧಾರವಾಡ ಉಪನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಈಗ ಪೊಲೀಸರು ಸ್ಥಳೀಯರ ಮಾಹಿತಿ ಮೇರೆಗೆ ಅನಾಥವಾಗಿ ನಿಂತಿದ್ದ ಕಾರ್‌ನ್ನು ಠಾಣೆಗೆ ಎತ್ತಾಕೊಂಡ ಹೋಗಿದ್ದು, ಮಾಲೀಕ ಪತ್ತೆ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಕಾರ್ ಮಾಲೀಕ ಯಾರು, ಇನ್ಮಬ್ಬರ ನಿವಾಸದ ಮುಂದೆ ಇಷ್ಟು ದಿನ‌ ಪಾರ್ಕ್ ಮಾಡಿ ಮರಳಿ ತೆಗೆದುಕೊಂಡು ಹೋಗಿಲ್ಲ ಎಂಬ ಪ್ರಶ್ನೆಗಳುಗೆಲ್ಲ ಉತ್ತರ ಸಿಗಬೇಕಿದೆ.

Tags:

error: Content is protected !!