Uncategorized

ಯಡೂರ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ

Share

• ಯಡೂರು ಶ್ರೀ ವೀರಭದ್ರೇಶ್ವರರ ಸನ್ನಿಧಿಯಲ್ಲಿ ಶಿವನಾಮ ಸ್ಮರಣೆ
• ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತಸಾಗರ
• ಮಹಾರಾಷ್ಟ್ರ, ಆಂಧ್ರದಿಂದ ಹರಿದು ಬಂದ ಭಕ್ತರು
• ವೀರಭದ್ರೇಶ್ವರ ಹಾಗೂ ಭದ್ರಕಾಳಿ ದೇವಿಗೆ ವಿಶೇಷ ಪೂಜೆ

ದಕ್ಷಿಣದ ಕಾಶಿ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು.

ಕರ್ನಾಟಕ,ಮಹಾರಾಷ್ಟ್ರ,ಆಂಧ್ರಪ್ರದೇಶದ ಸೇರಿದಂತೆ ವಿವಿಧ ಭಾಗಗಳಿಂದ ಸಹಸ್ರಾರು ಭಕ್ತರು ಕೃಷ್ಣಾನದಿಯಲ್ಲಿ ಪವಿತ್ರ ಸ್ನಾನ ಮಾಡಿ ಅತ್ಯಂತ ಭಕ್ತಿಭಾವದಿಂದ ಶ್ರೀವೀರಭದ್ರೇಶ್ವರ ದೇವರಿಗೆ ಜಲಾಭಿಷೇಕವನ್ನು ಮಾಡಿದರು.ಅದಲ್ಲದೇ ಮಹಾಶಿವರಾತ್ರಿ ಅಂಗವಾಗಿ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ,ಅಭಿಷೇಕ,ಮಹಾ ಆರತಿ,ನವದ್ಯ,ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗುಲಿದೆ.ಭಕ್ತರು ಶಾಂತಿಯುತವಾಗಿ ಸಾಲಿನಲ್ಲಿ ನಿಂತು‌ ಶ್ರೀವೀರಭದ್ರೇಶ್ವರ,ಭದ್ರಕಾಳಿದೇವಿಯ ದರ್ಶನ ಪಡೆದು ಪಾವನರಾದರು.

Tags:

error: Content is protected !!