Kagawad

ಐನಾಪುರ್ ಪಟ್ಟಣದ ಶಾಂತಿಸಾಗರ್ ಆಂಗ್ಲ ಮಾಧ್ಯಮ ಶಿಕ್ಷಣ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಂದ ರುಚಿ ಸಂಭ್ರಮ ಮತ್ತು ವಿಜ್ಞಾನ ಜ್ಞಾನೋತ್ಸವ ಕಾರ್ಯಕ್ರಮ ಜರಗಿತು.

Share

ವಿದ್ಯಾರ್ಥಿಗಳಲ್ಲಿ ಇರುವ ಸೂಕ್ಷ್ಮ ಬುದ್ಧಿ ಕೌಸಲ್ಯಗಳನ್ನು ಬಳಸಿ ಅವರಿಗೆ ನಿಸರ್ಗದಲ್ಲಿಯ ಬೇರೆ ಬೇರೆ ವಿಷಯಗಳ ಮೇಲೆ ವಿಜ್ಞಾನದ ಆವಿಷ್ಕಾರ ಮಾಡಲು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಐನಾಪುರದ
ಶಾಂತಿಸಾಗರ್ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಲ್ಲಿ ಜ್ಞಾನದ ಬೆಳವಣಿಗೆಗಾಗಿ ಒಳ್ಳೆಯ ಪ್ಲಾಟ್ಫಾರ್ಮ್ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಬಿ ಆರ್ ಸಿ ಭರತ ಟೂಣಗೆ ಐನಾಪುರದಲ್ಲಿ ಹೇಳಿದರು.

ಶನಿವಾರ ದಂದು ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶಾಂತಿಸಾಗರ್ ಆಂಗ್ಲ ಮಾಧ್ಯಮ ವಿದ್ಯಾಪೀಠದ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ರುಚಿ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮಕೆ
ಅತಿಥಿಗಳಾಗಿ ಆಗಮಿಸಿದ ಬಿ ಆರ್ ಸಿ ಭರತ ಟೂಣಗೆ ಮಾತನಾಡಿದರು.

ಶಿಕ್ಷಣ ಸಂಸ್ಥೆಯ6 ರಿಂದ ಆರರಿಂದ 10ನೇ ತರಗತಿಯ 60 ವಿದ್ಯಾರ್ಥಿಗಳ ಗುಂಪುಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರೇ ನಿರ್ಮಿಸಿದ ವಾಟರ ಸೈಕಲ್, ಇರಿಗೇಶನ್ ಸಿಸ್ಟಮ್, ರೋಬೋಟ್, ಅರಣ್ಯ ನಾಶದ ಪರಿಸರ ಮೇಲೆ ಆಗುವ ಪರಿಣಾಮಗಳು, ಸಮ್ಮಿಶ್ರ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ತಮ್ಮ ವಸ್ತು ಪ್ರದರ್ಶನ ಮಾಡಿದರು. ಎಲ್ ಕೆ ಜಿ ರಿಂದ 5ನೆ ತರಗತಿಯ ವಿದ್ಯಾರ್ಥಿಗಳು 70 ವಿವಿಧ ತರಹದ ತಿಂಡಿಗಳು ನಿರ್ಮಿಸಿ ತಮ್ಮ ಪೋಷಕರ ಜೊತೆ ಅವುಗಳ ಮಾರಾಟ ಯಾವ ರೀತಿ ಮಾಡಬೇಕು ಎಂಬ ಮಾಹಿತಿ ಪಡೆದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರುಣ ಗಾಣಿಗೇರ್ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದು ಅವರಿಗೆ ಕೇವಲ ಪಠ್ಯಪುಸ್ತಕ ಗಳಲ್ಲಿಯ ಜ್ಞಾನ ಮಾತ್ರ ಬೋಧಿಸದೆ ಅವರಿಗೆ ಎಲ್ಲ ರೀತಿಯ ಸಾಮಾಜಿಕ ವ್ಯವಹಾರ ಜ್ಞಾನ ಬಗ್ಗೆ ಮಾಹಿತಿ ನೀಡುವ ಇದು ಒಂದು ಪ್ರಯೋಗ ಎಂದು ಹೇಳಿ ಎಲ್ಲ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು ನಿರ್ಮಿಸಿದ ಆವಿಷ್ಕಾರಗಳು ಅವರ ಜೀವನದಲ್ಲಿ ದಾರಿದೀಪವಾಗಲಿಲೆ
ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪಾಯಪ್ಪಾ ಕೂಡುವಕ್ಕಲಗಿ, ಕಾರ್ಯದರ್ಶಿ ಅನುಪ ಶೆಟ್ಟಿ, ನಿರ್ದೇಶಕರಾದ ಅಪ್ಪಾಸಾಹೇಬ್ ಚೌಗುಲೆ, ರಾಮು ಪಾವಲಿ, ಶಿವಾನಂದ ಕಮತಗಿ, ಹಿರಿಯ ವೈದ್ಯರಾದ ಮೋಹನ್ ಮುತಾಲಿಕ,,ಪಟ್ಟಣ ಪಂಚಾಯಿತಿಯ ಸದಸ್ಯ ಪ್ರವೀಣ್ ಗಾಣಿಗೇರ್, ಐನಾಪುರ್ ಸಿ. ಆರ. ಸಿ. ಎ ಏ ಖೂತ,
ಡಾ.ಅರವಿಂದ್ ಕಾರ್ಚಿ, ಮುಖ್ಯೋಧ್ಯಾಪಕ ಬಿ ಜಿ ಮೋಳೇಕರ್, ನಿವೃತ್ತ ಶಿಕ್ಷಕರಾದ ಆರ್ ಬಿ ಬಸಣ್ಣವರ್, ಅನೇಕರಿದ್ದರು. ಸಹ ಶಿಕ್ಷಕಿ ಕವಿತಾ ದೇಸಾಯಿ ಸ್ವಾಗತಿಸಿ ನಿರೂಪಿಸಿದರು, ಸರಸ್ವತಿ ಬ್ಯಾಡಗಿ ಹೊಂದಿಸಿದರು.

Tags:

error: Content is protected !!