ಕಿತ್ತೂರು : ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕು 2024-25 ನೆ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಜಿಲ್ಲೆಗೆ ಕಿತ್ತೂರು ತಾಲ್ಲೂಕು ಪ್ರಥಮ ಸ್ಥಾನ ಪಡೆದ ಪ್ರಯುಕ್ತ ಕಿತ್ತೂರು ತಾಲ್ಲೂಕಿನ ಎಲ್ಲ ಪ್ರೌಢ ಶಾಲೆಗಳ ಶಿಕ್ಷಕರ ಹಾಗೂ ಮುಖ್ಯ ಶಿಕ್ಷಕರ ಪರವಾಗಿ ಫಲಿತಾಂಶ ವೃದ್ಧಿಸಲು ಶ್ರಮ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ವೈ ತುಬಾಕಿ ಯವರನ್ನು ಕಿತ್ತೂರು ತಾಲೂಕಾ ಎನ್ ಪಿ ಎಸ್ ಸರಕಾರಿ ನೌಕರರ ಸಂಘದ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ನಿ ಪೂ ರಾಜ್ಯ ಪರಿಷತ ಸದಸ್ಯರಾದ ಡಾ ಶೇಖರ ಹಲಸಗಿ ಯವರು ಪ್ರಾಸ್ತವಿಕವಾಗಿ ಮಾತನಾಡುತ್ತ ಫಲಿತಾಂಶ ವೃದ್ಧಿಗೆ ಶ್ರಮಿಸಿದವರನ್ನು ಇದಕ್ಕೆ ಪ್ರೋತ್ಸಾಹ ನೀಡಿದ ಕ್ಷೇತ್ರದ ಮಾನ್ಯ ಶಾಸಕರನ್ನು ಹಾಗೂ ಇಲಾಖೆಯ ಸಿಬ್ಬಂದಿ ಶಿಕ್ಷಕರನ್ನು ಸ್ಮರಿಸಿ ದರು ಇದೆ ಸಂದರ್ಭದಲ್ಲಿ ಕಿತ್ತೂರು ತಾಲ್ಲೂಕಿನ ನೂತನ ಎನ್ ಪಿ ಎಸ್ ಘಟಕದ ನೂತನ ಅಧ್ಯಕ್ಷರಾಗಿ ಶ್ರೀಮತಿ ವೀಣಾ ಹಿರೇಮಠ, ಹಾಗೂ ಕಾರ್ಯದರ್ಶಿ ರೂಮೋಜಿ ಅವರನ್ನು ಗೌರವಿಸಲಾಯಿತು
ಪ್ರಾರಂಭದಲ್ಲಿಮಂಜುನಾಥ ಶೆಟ್ಟಿನ್ನವರ ಸ್ವಾಗತ ಕೋರಿದರು ವೇದಿಕೆ ಮೇಲೆ ನೌಕರರ ಸಂಘದ ನಿರ್ದೇಶಕರು ಕೆ ಎ ಜಯಕ್ಕನವರ, ವಿ ಎಸ್ ಬರಗಾಲಿ,ವಿ ಎಸ್ ನಂದಿಹಳ್ಳಿ, ಎನ್ ಪಿ ಎಸ್ ಅಧ್ಯಕ್ಷರು ಶ್ರೀಮತಿ ವೀಣಾ ಹಿರೇಮಠ, ಶಿಕ್ಷಕರ ಸಂಘದ ಅಧ್ಯಕ್ಷರು ಎಸ್ ಎನ್ ಹಿರೇಮಠ, ಶಿಕ್ಷಣ ಸಂಯೋಜಕರು ಎಂ ವೈ ಕಡಕೋಳ, ಎಸ್ ಎಂ ಶಹಾಪೂರಮಠ, ಶ್ರೀಮತಿ ಎಸ್ ಎಂ ಪಾಶ್ಚಾಪೂರ, ಶ್ರೀದೇವಿ ಕಾರಜೋಳ, ಜಿ ಜಿ ಹನುಮಸಾಗರ, ಶೌಕತ್ ನದಾಫ,
ಎಂ ಆರ್ ಪಾಟೀಲ್, ಸಂಘದ ಪದಾಧಿಕಾರಿಗಳು ಬಿ ಈ ಓ ಕಚೇರಿ ಸಿಬ್ಬಂದಿ, crp ವಿನೋದ ಪಾಟೀಲ್ ಹಂಬರ, ಶ್ರೀಮತಿ ಕೋಟಗಿ, ಶ್ರೀಮತಿ ಪರಪ್ಪನವರ, ಹುಲೆಪ್ಪನವರಮಠ, ಶಿವನಗೌಡ ಪಾಟೀಲ್, brp ಕುರಬೇಟ, ಉಪಸ್ಥಿತರಿದ್ದರು ಸಂಘದ ಪದಾಧಿಕಾರಿಗಳು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಗೌರವಿಸಿ ಸನ್ಮಾನಿದರು.
