ಚೆನ್ನಮ್ಮನ ಕಿತ್ತೂರು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆಯ ನೂತನ ಕಿತ್ತೂರು ತಾಲೂಕು ಘಟಕದ ಆಯ್ಕೆಯನ್ನು ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲ ವಂಟಮೂರಿ ಆಯ್ಕೆ ಮಾಡಿ ಪಧಾದಿಕಾರಿಗಳಿಗೆ ಐಡಿ ಕಾರ್ಡ್ ಹಸ್ತಾಂತರಿಸಿದರು.

ತದನಂತರ ಮಾತನಾಡಿದ ಶ್ರೀಶೈಲ ವಂಟಮೂರಿ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಾಡು ನುಡಿ ಜಲದ ಜೊತೆಗೆ ಈ ಭಾಗದ ಜಲ್ವಂತ ಸಮಸ್ಯೆಗಳನ್ನು ಸಂಘಟನೆಯ ಮೂಲಕ ಅವುಗಳ ಧ್ವನಿಯಾಗಿ ನಾಗರಿಕ ಸಮಾಜದ ಜನಸ್ನೇಹಿಯಾಗಿ ಕೆಲಸ ಮಾಡುವಂತೆ ನೂತನ ತಾಲೂಕು ಘಟಕಕ್ಕೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ನೂತನ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಾಬು ಚ ಪಾಟೀಲ್ ಮಾತನಾಡಿ
ಈ ತಾಲೂಕು ಘಟಕದಿಂದ ಮುಂದಿನ ದಿನಗಳಲ್ಲಿ ನಾಡು ನುಡಿ ಕಲೆಯ ಸಂಸ್ಕೃತಿಯ ಜೊತೆಗೆ ಅತಿ ಹೆಚ್ಚು ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಘಟಕದಿಂದ ಉತ್ತಮ ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುಲಾಗುವು ಜೊತೆಗೆ ಪ್ರತಿ ಗ್ರಾಮಮಟ್ಟದಲ್ಲೂ ಸಂಘಟನೆಯ ಶಾಖೆಗಳನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಹಾಗೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಸುನಿಲ್ ಎಂ.ಎಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಯುವರಕ್ಷಣಾ ವೇದಿಕೆ ಈ ನಾಡಿನಲ್ಲಿ ಜನಪರ ಶಕ್ತಿ ಕೇಂದ್ರವಾಗಿ ಈಗಾಗಲೇ ಗುರುತಿಸಿಕೊಂಡು ಸಾಕಷ್ಟು ಹೋರಾಟಗಳ ಮೂಲಕ ಕನ್ನಡಾಂಬೆಯ ಚೊಚ್ಚಲ ಕುಡಿಯಾಗಿ ಬೆಳೆಯುತ್ತಿದೆ ಎಂದು ಬಾಬು ಪಾಟೀಲ್ ಮಾತನಾಡಿದ್ದರು
ಸುನಿಲ್ ಎಂಎಸ್ ಅವರಲ್ಲಿ ಇರುವ ಕನ್ನಡ ಅಭಿಮಾನ ಮತ್ತು ನಮ್ಮ ಕಲೆ ಸಂಸ್ಕೃತಿಯ ಕುರಿತು ಅವರಿಗಿರುವ ಕಾಳಜಿಯ ಜೊತೆಗೆ ಕನ್ನಡಕ್ಕಾಗಿ ಅವರು ಕೈಗೊಂಡಿರುವ ಸಾಕಷ್ಟು ಹೋರಾಟಗಳ ಪ್ರತೀಕದ ಫಲವೇ ಇಂದು ಕಿತ್ತೂರಿನಲ್ಲಿ ತಾಲೂಕು ಘಟಕ ರಚನೆಯಾಗಿದೆ ಎಂದು ಬಾಬು ಪಾಟೀಲ ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಶ್ರೀಶೈಲ ಮಂಟಮುರಿ ಕಿತ್ತೂರು ಪ್ರಧಾನ ಕಾರ್ಯದರ್ಶಿಯಾದಂತ ನಾಗೇಶ್ ಹಣಬರ ಬೈಲಹೊಂಗಲ ತಾಲೂಕು ಸಂಚಾಲಕ ಶಬ್ಬೀರ್ ಕುದುರಿ, ಹಾಗೂ ಕಿತ್ತೂರು ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿಗಾರರು
ಶಾನೂಲ ಮ
ಬೈಲಹೊಂಗಲ
