kitturu

ಸಮಸಮಾಜವನ್ನು ನಿರ್ಮಿಸಿ ಸ್ವಾತ್ರಂತ್ರ್ಯಕ್ಕಾಗಿ ಮಡಿದವರಿಗೆ ಗೌರವ ಸಲ್ಲಿಸಿ

Share

ಕಿತ್ತೂರು: (Kittur) ಕಿತ್ತೂರು ರಾಣಿ ಚೆನ್ನಮ್ಮ (Rani Channamma) ಸ್ವಾತಂತ್ರ್ಯ ಭಾರತದ ಬೆಳ್ಳಿಚುಕ್ಕಿ. ದೇಶದಲ್ಲಿನ ಸರ್ವಜನಾಂಗಗಳನ್ನು ಪ್ರೀತಿಸಿ ಎಲ್ಲರನ್ನು ಮುಖ್ಯವಾಹಿನಿಗೆ ತರುವ ಮೂಲಕ ದೇಶಕ್ಕಾಗಿ ಮಡಿದವರಿಗೆ ಗೌರವವನ್ನು ಸಲ್ಲಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.

 

ಇಂದು ಕಿತ್ತೂರು ರಾಣಿ ಚೆನ್ನಮ್ಮಳ ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಧೇಶಿಸಿ ಅವರು ಮಾತನಾಡಿದರು, ರಾಣಿ ಚೆನ್ನಮ್ಮನವರ ಬಗ್ಗೆ ಸರ್ಕಾರ ಅಪಾರವಾದ ಗೌರವವನ್ನು ಹೊಂದಿದ್ದು, ಮೊಟ್ಟ ಮೊದಲ ಬಾರಿಗೆ ಅವರ ಸರ್ಕಾರಿ ಮಟ್ಟದಲ್ಲಿ ಜಯಂತಿಯನ್ನು ಆಚರಿಸಿದ್ದು ಕಾಂಗ್ರೆಸ ಸರ್ಕಾರ. ಬ್ರಿಟಿಷರ ವಿರುದ್ಧ ಭಾರತದ ದೇಶದಲ್ಲಿ ಮೊಟ್ಟ ಮೊದಲ ಬಾರಿ ರಣಕಹಳೆಯನ್ನು ಊದಿದ್ದು ಧೀಮಂತ ಮಹಿಳೆ ರಾಣಿ ಚೆನ್ನಮ್ಮ. ಅವರ ಹೋರಾಟಕ್ಕೆ ಸಾಥ್ ನೀಡಿದ್ದು ಆಮಟೂರು ಬಾಳಪ್ಪ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನಂತಹ ಅಪಾರ ದೇಶಭಕ್ತರು. ದೇಶದಲ್ಲಿನ ಸರ್ವಜನಾಂಗಗಳನ್ನು ಪ್ರೀತಿಸಿ ಎಲ್ಲರನ್ನು ಮುಖ್ಯವಾಹಿನಿಗೆ ತರುವ ಮೂಲಕ ದೇಶಕ್ಕಾಗಿ ಮಡಿದವರಿಗೆ ಗೌರವವನ್ನು ಸಲ್ಲಿಸಬೇಕೆಂದರು.

ಇತಿಹಾಸ ಗೊತ್ತಿರುವವರು ಇತಿಹಾಸವನ್ನು ರೂಪಿಸುತ್ತಾರೆ ಎಂಬ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮಾತನ್ನು ಸ್ಮರಿಸಿದ ಸಿಎಂ ದೇಶದಲ್ಲಿ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಬೇಧಭಾವವಿಲ್ಲದೇ ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಕೆಲಸಗಳಾಗಬೇಕು. ಯಾರನ್ನು ಯಾರು ದ್ವೇಷಿಸಬಾರದು. ಈ ದೇಶದಲ್ಲಿರುವ 1.43 ಕೋಟಿ ಜನರೆಲ್ಲರೂ ಭಾರತ ಮಾತೆಯ ಮಕ್ಕಳೆ. ಆದ್ದರಿಂದ ವಿಷ ಬೀಜ ಭಿತ್ತಿ ದೇಶವನ್ನು ಒಡೆಯುವವರನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಹುಟ್ಟುತ್ತ ಹುಟ್ಟುತ್ತ ವಿಷಮಾನವ, ಬೆಳೆಯುತ್ತ ಬೆಳೆಯುತ್ತ ಅಲ್ಪ ಮಾನವನಾಗದೇ, ವಿಶ್ವಮಾನವನಾಗಬೇಕು.

 

ಸಮಸಮಾಜ ನಿರ್ಮಾಸಿ, ಎಲ್ಲರನ್ನು ಮುಖ್ಯವಾಹಿನಿಗೆ ತರಬೇಕು. ಕರ್ಮ ಸಿದ್ಧಾಂತ, ಕಂದಾಚಾರ, ಮೌಢ್ಯವನ್ನು ತಿರಸ್ಕರಿಸಿ ವಿಶ್ವಜ್ಯೋತಿ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಗೌರವ ಸಲ್ಲಿಸಬೇಕೆಂದು ಕರೆ ನೀಡಿದರು.

 

ಅದ್ಧೂರಿಯಾಗಿ 200ನೇ ಕಿತ್ತೂರು ಉತ್ಸವ ಆಚರಣೆಯನ್ನು ಕಂಡು ಮುಖ್ಯಮಂತ್ರಿಗಳು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲರನ್ನು ಪ್ರಶಂಸಿಸಿದರು.

 

 

ಈ ಸಂದರ್ಭದಲ್ಲಿ ಕೂಡಲ ಸಂಗಮ ಗುರುಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜೀ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು.

 

Tags:

#cmkarnataka #cmsiddharamaiah #cmsiddharamayya #kitturutsav inbelgaum innews
error: Content is protected !!