ಮಹಾವಿಕಾಸ್ ಆಘಾಡಿಯ ಅಭ್ಯರ್ಥಿಯ ಪರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಬಹಿರಂಗ ಪ್ರಚಾರ ಕೈಗೊಂಡರು.

ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಿಮಿತ್ಯ ಕೊಲ್ಹಾಪುರದಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಡಾ ಅಂಜಲಿ ನಿಂಬಾಳ್ಕರ್ ಅವರು ಬೃಹತ್ ಸಭೆಯಲ್ಲಿ ಮಾತನಾಡಿ ಸಾವಿರಾರು ಜನ ಸಮೂಹಕ್ಕೆ ಉತ್ಸಾಹ ಮೂಡಿಸಿದರು. ಈ ಸಂದರ್ಭದಲ್ಲಿ ವಿಶೇಷವೆಂದರೆ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಉಪಸ್ಥಿತರಿದ್ದು ಡಾ ಅಂಜಲಿ ನಿಂಬಾಳ್ಕರ್ ಅವರ ವಿಭಿನ್ನ ಶೈಲಿಯ ಭಾಷಣದ ಶೇಲಿಯನ್ನು ಅವರು ಕೂಡಾ ಗಮನಿಸಿ ಮತದಾರರ ಮನವೊಲಿಕೆಗೆ ಮಾಡುವ ಪರಿಯೊಂದಿಗೆ ತಾವು ಕೂಡ ಮಹಾರಾಷ್ಟ್ರದ ಜನತೆಗೆ ಮಹಾ ವಿಕಾಸ ಆಘಾಡಿಯ ಅಭ್ಯರ್ಥಿಗಳಿಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಕೇಳಿಕೊಂಡರು.

