Chikkodi

ಇಂಗಳಿ ಗ್ರಾಮದಲ್ಲಿ ಮರಾಠಾ ಸಮುದಾಯ ಭವನ ಉದ್ಘಾಟಿಸಿದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ

Share

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ೫೦ ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಮರಾಠಾ ಸಮುದಾಯ ಭವನವನ್ನು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಉದ್ಘಾಟಿಸಿದರು.

ಶಾಸಕ ಗಣೇಶ ಹುಕ್ಕೇರಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ 50 ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮರಾಠಾ ಸಮುದಾಯ ಭವನವನ್ನು ಇವತ್ತು ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಶುಭದಿನದಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಉದ್ಘಾಟಿಸಿದರು‌.ನಂತರ ಇಂಗಳಿ ಗ್ರಾಮದ ಛತ್ರಪತಿ ಶಿವಾಜಿ ಮರಾಠಾ ಮಂಡಳದ ಪರವಾಗಿ ಪ್ರಕಾಶ ಹುಕ್ಕೇರಿ ಅವರನ್ನು ಸತ್ಕರಿಸಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಕಾಶ ಹುಕ್ಕೇರಿ ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಜಾತಿ,ಧರ್ಮ,ಭೇದ ಮಾಡಿಲ್ಲ.ಎಲ್ಲ ಜಾತಿ,ಧರ್ಮ ಅವರಿಗೆ ಸಮುದಾಯ ಭವನ ನಿರ್ಮಾಣವನ್ನು ಮಾಡಿಕೊಟ್ಟಿದ್ದೇನೆ ಹಾಗೂ ಇಂಗಳಿ ಗ್ರಾಮದಲ್ಲಿ ರಸ್ತೆ ಎತ್ತರಕ್ಕೆ ೧ ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದೆ ಎಂದು ಮಾಜಿ‌ ಸಂಸದ ಪ್ರಕಾಶ ಹುಕ್ಕೇರಿ ತಿಳಿಸಿದರು.

ನಂತರ ಇಂಗಳಿ ಗ್ರಾಮದ ಜ್ಞಾನದೇವ ಜಾಧವ ಮಹಾರಾಜರು ಮಾತನಾಡಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿಯವರು ನಮ್ಮ ಇಂಗಳಿ ಗ್ರಾಮಕ್ಕೆ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ…ಹಾಗೂ ಇಂಗಳಿ ಗ್ರಾಮದಲ್ಲಿ ಮರಾಠಾ ಸಮುದಾಯ ಭವನದ ನಿರ್ಮಿಸಿಕೊಟ್ಟಿದ್ದಕ್ಕೆ ಶಾಸಕ ಗಣೇಶ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೆವೆ ಎಂದರು.

ಅಣ್ಣಾಸಾಹೇಬ ಶಿಂಧೆ ದಂಪತಿಗಳಿಂದ ನೂತನ ಮರಾಠಾ ಭವನದ ಹೋಮ ಹವನದ ಕಾರ್ಯಕ್ರಮವನ್ನು ನೇರವರಿಸಿದರು..

ಈ ಸಂಧರ್ಭದಲ್ಲಿ ರಾಮಾ ಐಹೊಳೆ,ಅಶೋಕ ಜೋಶಿ,ಅಣ್ಣಾಸಾಹೇಬ‌ ಶಿಂಧೆ,ಅಶೋಕ ಅಡಸೋಳೆ,ಸಂಭಾಜಿ ಘೋಸರವಾಡೆ,ಸಂಜಯ ಮಾನೆ,ನಿಲೇಶ ಧಾಬಡೆ,ಬಾಜಿರಾವ ಪವಾರ,ಧನಾಜಿ ಘೋಸರವಾಡೆ,ಕಿರಣ ಜತ್ರಾಟೆ,ರಾಜು ಜತ್ರಾಟೆ,ಸಂಜಯ ಪವಾರ,ಶಶಿಕಾಂತ ಧನವಡೆ,ಅಜೀತ ಪವಾರ,ಬಾಬಾಸಾಬ ಧಾಬಡೆ,ರವಿ ಶಿರಹಟ್ಟಿ, ರಾಜು ಶೆಟ್ಟಿ, ಅಜೀತ ಚಿಗರೆ,ಅಣ್ಣಾಸಾಹೇಬ‌ ಪವಾರ,ಅರುಣ ಪಾಟೋಳೆ,ಎಂ.ಡಿ.ಜಾಧವ,ರಾಮಾ ಚಿಂಚಣೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!