bagalkot

ಬಾಗಲಕೋಟೆಯಲ್ಲಿ ಗ್ರಾಹಕರಿಗೆ ದುಬಾರಿಯಾದ ಬೆಳಕಿನ ಹಬ್ಬ…

Share

ಮುಳುಗಡೆ ನಗರ ಬಾಗಲಕೋಟೆಯಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನವನಗರ ಹಾಗೂ ವಿದ್ಯಾಗಿರಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಹಬ್ಬದ ಸಿದ್ಧತೆ ನಡೆಸುತ್ತಿದ್ದ ಗ್ರಾಹಕರಿಗೆ ಬಿಸಿ ತಟ್ಟಿದೆ.

ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರದಿಂದ ಆಚರಿಸಲು ಸಜ್ಜಾಗಿದ್ದ ಬಾಗಲಕೋಟೆ ಜನಸಾಮಾನ್ಯರಿಗೆ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಕಳವಳ ಮೂಡಿಸಿದೆ. ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿಯ ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಅತ್ಯಗತ್ಯವಾಗಿ ಬೇಕಾಗುವ ಪೂಜಾ ವಸ್ತುಗಳ ದರವು ತೀವ್ರವಾಗಿ ಹೆಚ್ಚಳ ಕಂಡಿದೆ.


ಸಾಂಪ್ರದಾಯಿಕ ಆಚರಣೆಗಳಿಗೆ ಬೇಕಾದ ಕಬ್ಬು, ಬಾಳೆ ದಿಂಡು, ನಾನಾ ರೀತಿಯ ಹೂವುಗಳು, ಮಣ್ಣಿನ ಹಣತೆಗಳು, ಬೂದುಗುಂಬಳಕಾಯಿ ಹಾಗೂ ನಿಂಬೆಹಣ್ಣಿನ ಬೆಲೆಗಳು ತುಟ್ಟಿ-ತುಟ್ಟಿಯಾಗಿರುವುದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ವಸ್ತುಗಳನ್ನು ಖರೀದಿಸಬೇಕಾದ ಸ್ಥಿತಿಗೆ ಸಾರ್ವಜನಿಕರು ಸಿಲುಕಿದ್ದಾರೆ.

Tags:

error: Content is protected !!