Chikkodi

ಅಲ್ಯೂಮಿನಿಯಂ ತಂತಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ; ₹1.75 ಲಕ್ಷ ಮೌಲ್ಯದ ಸೊತ್ತು ಜಪ್ತಿ

Share

ವಿದ್ಯುತ್ ಕಂಬಗಳಿಗೆ ಅಳವಡಿಸಲಾಗಿದ್ದ ಅಲ್ಯೂಮಿನಿಯಂ ತಂತಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹1,75,000 ಮೌಲ್ಯದ ಕಳವು ಮಾಡಲಾದ ತಂತಿ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಿನಾಂಕ: 07/08/2026 ರಂದು ಮೇಲ್ವಿಚಾರಕ ಅಭಿಯಂತರ ಕಚೇರಿಯಿಂದ ಸಂತೋಷ್ ಸಿ. ಪಾಟೀಲ್ ಎಂಬುವವರು ನೀಡಿದ ದೂರಿನ ಪ್ರಕಾರ, ದಿನಾಂಕ 01/08/2026 ರ ಸಾಯಂಕಾಲ 6.00 ಗಂಟೆಯಿಂದ 02/08/2026 ರ ಮುಂಜಾನೆ 09.00 ಗಂಟೆಯ ಅವಧಿಯಲ್ಲಿ ಚಿಕ್ಕೋಡಿ ಜಿಪಂ ಹಾಗೂ ಶಂಭುಲಿಂಗೇಶ್ವರ ನಗರದಲ್ಲಿ ಹೊಸದಾಗಿ ಹಾಕಲಾದ ಪೋಲ್‌ಗಳಿಗೆ ಅಳವಡಿಸಲಾಗಿದ್ದ ಸುಮಾರು 200 ಕಿಲೋ ತೂಕದ, ಅಂದಾಜು ₹70,000/- ಮೌಲ್ಯದ ಅಲ್ಯೂಮಿನಿಯಂ ತಂತಿಯನ್ನು ದುಷ್ಕರ್ಮಿಗಳು ಕಟ್ ಮಾಡಿ ಕಳವು ಮಾಡಿಕೊಂಡು ಹೋಗಿದ್ದರು.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 276/2026, ಕಲಂ: 303(2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ರಾಮರಾಜನ್ , ಹೆಚ್ಚುವರಿ ಎಸ್‌ಪಿ ಆರ್. ಬಿ. ಬಸರಗಿ ಹಾಗೂ ಚಿಕ್ಕೋಡಿ ಉಪವಿಭಾಗದ ಡಿಎಸ್‌ಪಿ ಗೋಪಾಲಕೃಷ್ಣ ಗೌಡರ ಅವರ ಮಾರ್ಗದರ್ಶನದಲ್ಲಿ, ಸಿಪಿಐ ವಿಶ್ವನಾಥ ಲಮಾಣಿ‌ಹಾಗೂ ಪಿಸಿಐ ಶಿವಕುಮಾರ ಜಾದವ [ಸಿಆರ್‌ಪಿಎಸ್] ಅವರ ನೇತೃತ್ವದ ವಿಶೇಷ ತಂಡವು ತನಿಖೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ ಅಲ್ಯೂಮಿನಿಯಂ ತಂತಿ ಸುಮಾರು 200 ಕೆಜಿ ತೂಕದ್ದು (ಅಂದಾಜು ಮೌಲ್ಯ: ₹70,000/-) ಸ್ಪೆಂಡರ್ ಪ್ಲಸ್ ಬೈಕ್ ಸಂಖ್ಯೆ: KA-49-EE-6810) – ಮೌಲ್ಯ: ₹55,000/- ಹೀರೋ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ್* (ಸಂಖ್ಯೆ: KA-23-EE-2147) – ಮೌಲ್ಯ: ₹50,000/-.ವಶಪಡಿಸಿಕೊಳ್ಳಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಸಿಬ್ಬಂದಿಗಳಾದ ಎಸ್. ಆರ್. ಬಾಗವಾನ, ಮಹೇಶ ಎಸ್. ಕಾಂಬಳೆ, ಎಸ್. ಪಿ. ಗಲಗಲಿ, ರಾಮು ಕೆ. ಕುಕ್ಕೊಳ್ಳಿ, ವಿಜಯಕುಮಾರ ಬಿ. ಕಾಂಬಳೆ, ರಮೇಶ ಎಸ್. ತಾಂಬೋಟಿ ಹಾಗೂ ತಾಂತ್ರಿಕ ವಿಭಾಗದ ದಿನೇಶ ಹೆಗಡೆ ಅವರ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Tags:

error: Content is protected !!