Dharwad

ಧಾರವಾಡ ಹೆಬ್ಬಳ್ಳಿ ಜಿಲ್ಲಾ ಪಂ. ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶಗೌಡ ಕೊಲೆ ಪ್ರಕರಣ….

Share

ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಲರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾಜಿ ಸಚಿವ ವಿನಯ ಕುಲಕರ್ಣಿಗೆ ಸೇರಿ 17 ಜನ ಜೀವಾವಧಿ ಶಿಕ್ಷ ಪ್ರಕಟಿಸಿದ್ದು, ಸದ್ಯ ಈಗ ಕೆಲವರಿಗೆ ಹೈಕೋರ್ಟ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿದೆ. ಆದರೆ ಈಗ ಈ ಕೊಲೆ ಪ್ರಕರಣ ಎ1 ಆರೋಪಿ ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಬಸವರಾಜ್ ಮುತ್ತಿಗೆ ಕಾರ್ ಚಾಲಕನಿಗೆ ಜೀವ ಬೇದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.‌

ಹೌದು…. ಯೋಗೇಶಗೌಡ ಕೊಲೆ ಪ್ರಕರಣದ ಎ1ಆರೋಪಿಯಾಗಿದ್ದ ಬಸವರಾಜ್ ಮುತ್ತಿಗೆ‌ ಅವರು ಕಾರ ಚಾಲಕನ ಪ್ರಕಾಶ ನವಲೂರ ಎಂಬಾತನ ಧಾರವಾಡದ ಕುರುಬಗಟ್ಟಿ ನಿವಾಸಕ್ಕೆ 6ಜನ ಯುವಕರು ಬಂದು, ಚಾಲಕ ಪ್ರಕಾಶನ ಪತ್ನಿಗೆ ಭಯಗೊಳ್ಳಿಸಿ, ನಿನ್ನ ಪತಿ ಎಲ್ಲಿದ್ದಾನೆ..?. ಮುತ್ತಿಗೆ ಕಡೆ ಕೆಲಸ ಮಾಡುವುದನ್ನು ಬಿಡುವುದಕ್ಕೆ ಹೇಳಿ, ಇಲ್ಲವಾದಲ್ಲಿ ಅವನ ಶವ ಮನೆಗೆ ಬರುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪ್ರಕಾಶ ಆರೋಪಿಸಿದ್ದಾರೆ. ಈ ಕುರಿತು ಈಗ ಗರಗ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಚಾಲಕ‌ ಪ್ರಕಾಶ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ಸಾರೆ. ಕಳೆದ ಒಂದುವರೇ ವರ್ಷದಿಂದ ನಾನು ಬಸವರಾಜ್ ಅಣ್ಣನವರ ಬಳಿ ಕಾರ ಚಾಲಕನಾಗಿದ್ದೇನೆ. ನಾನು ಇಲ್ಲದ ಸಮಯದಲ್ಲಿ ಅಕ್ಟೋಬರ್ 3ರಂದು ಮನೆಗೆ ಬಂದು ಈ ರೀತಿ ಬೆದರಿಕೆ ಹಾಕಿದ್ದಾರೆ. ಗರ್ಭಿಣಿ ಮಹಿಳೆಯೊಂದಿಗೆ ಹೇಗೆ ನಡೆದುಕೊಳ್ಳಬೇಕು ಅನ್ನೊ ಬುದ್ದಿಯು ಬಂದವರಿಗಿಲ್ಲ. ಅವರಿಗೂ ಅಕ್ಕತಂಗಿಯವರು ಇರುತ್ತಾರೆ. ಸದ್ಯ ಈದರ ಬಗ್ಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಒಂದು ಕಡೆ ಮಾಫಿ ಸಾಕ್ಷಿ ಕಾರ್ ಚಾಲಕನಿಗೆ ಜೀವ ಬೆದರಿಕೆ. ಇನ್ನೊಂದು ಕಡೆ ಸುಪ್ರೀಂ ಕೋರ್ಟ್ ‌ನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಹಾಗೂ ಶಿಕ್ಷೆ ತಡೆ ಪ್ರಶ್ನಿಸಿ ಯೋಗೇಶಗೌಡ ಕುಟುಂಬದಿಂದ ಅರ್ಜಿ ವಿಚಾರಣೆ ನಡೆಯುತ್ತಿದೆ.‌ ಯೋಗೇಶಗೌಡ ಕೊಲೆ ಪ್ರಕರಣ ಮತ್ತೆ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎಂಬುವುದು ಕಾದು ನೋಡಬೇಕಿದೆ.‌

Tags:

error: Content is protected !!