Dharwad

ಪಶ್ಚಿಮ‌ ಪದವೀಧರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿ ಮೂರನೇ ಬಾರಿಗೆ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ- ಎಸ್ ವಿ ಸಂಕನೂರ

Share

ಪಶ್ಚಿಮ ಪದವೀಧರ ಕ್ಷೇತ್ರದಿಂದ ಈಗಾಗಲೇ ಎರಡು ಬಾರಿ ಆಯ್ಕೆಯಾಗಿ, ಈಗ ಮೂರನೇ ಬಾರಿಗೆ ಎನ್ಡಿಎ ಅಭ್ಯರ್ತಯಿಯಾಗಿ ಇಂದು ನಾಮಪತ್ರ ಸಲ್ಲುಸಿದ್ದೇನೆ. ಈ ಬಾರಿಯು ಮತದಾರರು ನನಗೆ ಆರ್ಶೀವಾದ ಮಾಡುತ್ತಾರೆ ಎಂದು ಎಸ್ ವಿ ಸಂಕನೂರ ಹೇಳಿದರು. ‌

ಇಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ರೋಡ್ ಶೋ ಮೂಲಕ ಎನ್ಡಿಎ ಅಭ್ಯರ್ತಯಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ, ಎನ್ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ರೋಡ್ ಶೋ ಹಾಗೂ ನಾಮಪತ್ರ ಸಲ್ಲುಸುವ ವೇಳೆ ಕೇಂದ್ರ ಸಚಿವ ಜೋಶಿ, ವಿಜಯೇಂದ್ರ, ಶೆಟ್ಟರ್, ಬೊಮ್ಮಾಯಿ ಸೇರಿ ನಾಯಕರು ಇದ್ದರು. ಬಹಳ ಯಶಸ್ವಿಯಾಗಿ ನಾಮಪತ್ರ ಸಲ್ಲಿಸಿದ್ದೇವೆ. 12 ವರ್ಷಗಳಿಂದ ನಾನು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪ್ರತಿನಿಧಿಸುತ್ತಿದ್ದೇನೆ. ನಿರುದ್ಯೋಗ ಸಮಸ್ಯೆ ಬಗ್ಗೆ ಸದನದಲ್ಲಿ‌ ಮಾತಾಡಿದ್ದೇನೆ. ಪ್ರತಿಯೊಂದು ಸದನದಲ್ಲಿ ನಾನು ನಿರುದ್ಯೋಗ ಬಗ್ಗೆ ಮಾತಾಡುತ್ತೇನೆ. ನೂರಕ್ಕೂ ಹೆಚ್ಚು ನಿಗಮ‌ ಮಂಡಳಿ ಇವೆ, ವಿವಿಧ ಇಲಾಖೆಯಲ್ಲಿ ನಾಲ್ಕು ಲಕ್ಷ ಹುದ್ದೆ ಖಾಲಿ ಇವೆ. ನಾಲ್ಕು ಲಕ್ಷ ಖಾಲಿ ಹುದ್ದೆ ಭರ್ತಿಗೆ ನಾನು ಒತ್ತಾಯ ಮಾಡಿದ್ದೇನೆ. ಶಾಲಾ ಶಿಕ್ಷಣ ಇಲಾಖೆ ಭರ್ತಿ ಮಾಡುವ ಪ್ರಕಟನೆ ಹೊರಡಿಸಿದ್ದಾರೆ, ಇದರ ಹೊರತು ಬೇರೆ ಯಾವುದೇ ಕೆಲಸ ಆಗಿಲ್ಲ. ಎನ್ ಪಿ ಎಸ್ ಬದಲು ಒಪಿಎಸ್ ತರುವ ಸಲುವಾಗಿ ಹೋರಾಟ ಮಾಡಿದ್ದೇನೆ. ನಮ್ಮ‌ ಜಿಲ್ಲೆಗಳಲ್ಲಿ ಕಾರ್ಖಾನೆ ಸ್ಥಾಪನೆ ಆಗಬೇಕು. ನಮ್ಮ‌ಭಾಗಕ್ಕೆ ಕಾರ್ಖಾನೆ ನಿಡುವಂತೆ ಒತ್ತಾಯ ಮಾಡುತ್ತೇನೆ. ನಾನು ಉದ್ಯೋಗ ಮೇಳ‌ ಮಾಡಿದ್ದೇನೆ. ಪದವೀಧರ ಸಮಸ್ಯೆ ಬಗ್ಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.‌

ಖಂಡಿತವಾಗಿ ಎನ್ ಡಿ ಎ ಅಭ್ಯರ್ಥಿಯಾಗಿ ನಾನು ಗೆಲ್ಲುತ್ತೇನೆ.‌ ನಾವು ನರೇಂದ್ರ ಮೋದಿ ಯುವಕರಿಗೆ ಕೊಟ್ಟ ಕೊಡುಗೆ, ನಾನು ಮಾಡಿದ ಸಾಧನೆ ಮುಂದಿಟ್ಟು ಚುನಾವಣೆ ಎದುರಿಸುತ್ತೇನೆ. ಎದುರಾಳಿ ವಿರುದ್ಧ ನನ್ನ ಚುನಾವಣೆ ಎಂದ ಸಂಕನೂರನಿಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹುದ್ದೆ ಭರ್ತಿಯಾಗಿವೆ ಎಂಬ ವಿಚಾರಕ್ಕೆ ಪ್ರತಿಕ್ರೆಯಿಸಿ, ಶಾಲಾ ಶಿಕ್ಷಣದಲ್ಲಿ 79 ಸಾವಿರ ಹುದ್ದೆ ಖಾಲಿ ಇವೆ. ಕೇವಲ 15 ಸಾವಿರ ನೋಟಿಪಿಕೇಷನ್ ಆಗಿದೆ. ನಾವು 14 ಸಾವಿರಕ್ಕೂ ಹೆಚ್ಚು ಮಾಡಿದ್ದೇವೆ, ಅತಿಥಿ ಉಪನ್ಯಾಸಕರ ವೇತನ ಹೆಚ್ಚು ಮಾಡಿದ್ದೇವೆ, ಶಾಲಾ ಕೊಠಡಿಗಳ ಸಮಸ್ಯೆ ನಿವಾರಣೆ ಮಾಡಿದ್ದೇವೆ. ನಾಲ್ಕು ಜಿಲ್ಲೆಯಲ್ಲಿ ಉದ್ಯೋಗ ಮೇಳ ಮಾಡಿದ್ದೇನೆ.‌ಒಪಿಎಸ್ ಬಂದ್ ಮಾಡಿದ್ದು ಕೇಂದ್ರದ ನಿರ್ಣಯದ ಮೆರೆಗೆ ಆಗಿದೆ. 45- 50 ಸಾವಿರ ಪೆನ್ಶನ್ ಬರುತ್ತಿರುವರೆಗೆ ಹೊಡೆತ ಬಿದ್ದಿದೆ. ಎನ್ ಪಿ ಎಸ್ ತೆಗೆಯಲು ನಾನೇ ಸಭಾ ತ್ಯಾಗ ಮಾಡಿದ್ದೇನೆ. ನಾನು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇನೆ.‌ ನಾನು ಈಗಾಗಲೇ ಒಂದು ಸುತ್ತಿನ‌ ಮತಯಾಚನೆ ಮಾಡಿದ್ದೇನೆ. ನನಗೆ ಯಾವುದೇ ತೊಂದರೆ ಆಗೋದಿಲ್ಲ, ಸದನದಲ್ಲಿ ನಾನು ಒತ್ತಡ ಹೇರಿದ್ರಿಂದ 54 ಸಾವಿರ ಹುದ್ದೆ ಭರ್ತಿ ಆಗಿವೆ ಎಂದರು.‌

ಬೈಟ್ ಎಸ್ ವಿ ಸಂಕನೂರು, ಪಶ್ಚಿಮ ಪದವೀಧರ ಎನ್ಡಿಎ ಅಭ್ಯರ್ಥಿ.

Tags:

error: Content is protected !!