Bagalkote

ವಿಜಯೇಂದ್ರ – ಯತ್ನಾಳ್ ಭೇಟಿಗೆ ಕಾಶಪ್ಪನವರ ವ್ಯಂಗ್ಯ…

Share

ಬಾಗಲಕೋಟೆಯಲ್ಲಿ ಬಿಜೆಪಿ ಆಂತರಿಕ ಬೆಳವಣಿಗೆ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಚಿವ ವಿಜಯಾನಂದ ಕಾಶಪ್ಪನವರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷದಿಂದ ಹೊರಹಾಕಿದವರನ್ನೇ ಮತ್ತೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧವೂ ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. “ಜೆಸಿಬಿ ಕೊಡ್ತೀನಿ ಅಂದವರು ಈಗ ಎಲ್ಲಿದ್ದಾರೆ? ಇದ್ದ ಜೆಸಿಬಿಯನ್ನೂ ಸ್ವಚ್ಛಗೊಳಿಸಿ ವಾಪಸ್ ತೆಗೆದುಕೊಂಡು ಹೋಗಿದ್ದಾರೆ” ಎಂದು ಯತ್ನಾಳ್‌ಗೆ ನೇರ ಟಾಂಗ್ ನೀಡಿದರು. ಇದೇ ವೇಳೆ ಬಿ.ವೈ. ವಿಜಯೇಂದ್ರ ಹಾಗೂ ಯತ್ನಾಳ್ ಭೇಟಿ ವಿಚಾರ ಪ್ರಸ್ತಾಪಿಸಿದ ಅವರು, ಪಕ್ಷದಿಂದ ಹೊರಹಾಕಿದವರನ್ನೇ ಮತ್ತೆ ಸೇರಿಸಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಈ ರೀತಿಯ ನಡವಳಿಕೆಯಿಂದ ಬಿಜೆಪಿಯವರು ಈಗಿರುವ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿ ಆಂತರಿಕ ಕಾದಾಟವನ್ನು ತೀವ್ರವಾಗಿ ವ್ಯಂಗ್ಯವಾಡಿದರು.

Tags:

error: Content is protected !!