Belagavi

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಮೇಲೆ ಮತ್ತೇ ಒತ್ತಡ ಹಾಕುತ್ತೇವೆ; ಚೂನ್ನಪ್ಪ ಪೂಜಾರಿ

Share

ಗುರ್ಲಾಪುರದಲ್ಲಿ ಆರಂಭವಾದ ರೈತ ಜನಾಂದೋಲನದ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಕಬ್ಬಿಗೆ ಪ್ರತಿ ಟನ್‌ಗೆ 3,600 ರೂಪಾಯಿ ಮೊದಲ ಕಂತಿನ ಬೆಲೆ ನಿಗದಿಯಾಗಿದೆ. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಮತ್ತಷ್ಟು ಸಮರ ಸಾರಲಾಗುವುದು ಎಂದು ರೈತ ಮುಖಂಡ ಚೂನ್ನಪ್ಪ ಪೂಜಾರಿ ಎಚ್ಚರಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಗುರ್ಲಾಪುರದಲ್ಲಿ ಕಳೆದ 12-13 ದಿನಗಳಿಂದ ಕಬ್ಬು ಬೆಳೆಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆರಂಭಿಸಿದ್ದ ಹೋರಾಟವು ಇದೀಗ ದೊಡ್ಡ ಜನಾಂದೋಲನವಾಗಿ ರೂಪುಗೊಂಡಿದೆ. ರೈತರು, ಕನ್ನಡಪರ ಸಂಘಟನೆಗಳು, ಮಾಜಿ ಸೈನಿಕರು ಹಾಗೂ ವಿದ್ಯಾರ್ಥಿಗಳ ಬೆಂಬಲದಿಂದ ನಡೆದ ಈ ಸುದೀರ್ಘ ಚಳುವಳಿ ಮತ್ತು ಬೆಳಗಾವಿ ಚಲೋ ಪಾದಯಾತ್ರೆಯ ಪರಿಣಾಮವಾಗಿ ಸರ್ಕಾರ ಮಣಿದಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ, ಕಬ್ಬು ಒಣಗಿ ಹಾನಿಯಾಗಬಾರದೆಂಬ ಕಾರಣಕ್ಕೆ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ರಾಜ್ಯಾದ್ಯಂತ ಪ್ರತಿ ಟನ್ ಕಬ್ಬಿಗೆ ಮೊದಲ ಕಂತಾಗಿ 3,600 ರೂಪಾಯಿ ನಿಗದಿಪಡಿಸಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಅಭಾವವಿದ್ದು, ಮುಂದಿನ ದಿನಗಳಲ್ಲಿ ಸಕ್ಕರೆ ದರ ಕೆಜಿಗೆ 60 ರಿಂದ 70 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ಸಕ್ಕರೆ ಮಾರಾಟದಿಂದ ಬರುವ ಹೆಚ್ಚುವರಿ ಲಾಭದಲ್ಲಿ ರೈತರಿಗೆ ಎರಡನೇ ಕಂತಾಗಿ ಪ್ರತಿ ಟನ್‌ಗೆ 500 ರಿಂದ 800 ರೂಪಾಯಿಗಳವರೆಗೆ ಶೇರಿಂಗ್ ಕೊಡಿಸುವ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ 13-14 ತಿಂಗಳ ಬೆಳೆಗೆ ಸಿಗುವ ದರಕ್ಕಿಂತ ನಮ್ಮಲ್ಲಿ 10-12 ತಿಂಗಳ ಬೆಳೆಗೆ ಹೆಚ್ಚಿನ ಲಾಭ ಸಿಗುವಂತೆ ಮಾಡಲಾಗಿದ್ದು, ಮಂಡ್ಯ-ಮೈಸೂರು ಭಾಗದ ಕಾರ್ಖಾನೆಗಳ ಸಕ್ಕರೆ ಮಾರಾಟದ ಲಾಭವನ್ನೂ ಅಲ್ಲಿನ ರೈತರಿಗೆ ತಲುಪಿಸುವವರೆಗೆ ಮಾರಾಟ ತಡೆಯಲಾಗುವುದು ಎಂದು ಪೂಜಾರಿ ತಿಳಿಸಿದರು.

ಇದೇ ವೇಳೆ ಕೃಷಿ ಕ್ಷೇತ್ರಕ್ಕೆ ಹಗಲು ವೇಳೆ 12 ಗಂಟೆಗಳ ಕಾಲ ನಿರಂತರ ತ್ರಿಫೇಸ್ ವಿದ್ಯುತ್ ನೀಡಬೇಕು ಮತ್ತು ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ ಸೇರಿದಂತೆ ಬಾಕಿ ಉಳಿದ ನೀರಾವರಿ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿ ತಕ್ಷಣವೇ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ 50 ಲಕ್ಷ ರೈತರ ಹಿತಾಸಕ್ತಿ ಕಾಯಲು ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಲಾಗುವುದು. ಈ ಹೋರಾಟವು ಕಲಬುರಗಿ, ಯಾದಗಿರಿ, ಗದಗ, ಹಾವೇರಿ ಹಾಗೂ ಕಾರವಾರಕ್ಕೂ ವಿಸ್ತರಿಸಲಿದ್ದು, ಹೋರಾಟಕ್ಕೆ ಬೆಂಬಲಿಸಿದ ಮಾಧ್ಯಮಗಳು, ವಕೀಲರು ಹಾಗೂ ಸಂಘಟನೆಗಳಿಗೆ ಧನ್ಯವಾದ ಸಲ್ಲಿಸಿದರು. ಬೈಟ್

Tags:

error: Content is protected !!