hubbali

ಪ್ಲಾಟ್ ದಾಖಲೆಗಳಿಗಾಗಿ ವ್ಯಕ್ತಿಗೆ ಕಿರುಕುಳ; ಇಬ್ಬರ ವಿರುದ್ಧ ದೂರು

Share

ಪ್ಲಾಟ್‌ಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿ, ಗನ್ ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪ ಹುಬ್ಬಳ್ಳಿಯ ಸೆಟ್ಲ್‌ಮೆಂಟ್ ಪ್ರದೇಶದಲ್ಲಿ ಕೇಳಿಬಂದಿದೆ.
‎ಮಹಮ್ಮದ್‌ಗೌಸ್ ಬಾಬುಸಾಬ ಚನ್ನಾಪುರ ಅವರು ಎಲೈಟ್ ಡೆವಲಪರ್ಸ್ ಮತ್ತು ಬಿಲ್ಡರ್ಸ್‌ನಿಂದ 600 ಚದರ ಅಡಿ ವಿಸ್ತೀರ್ಣದ ಪ್ಲಾಟ್ ಖರೀದಿಸಿದ್ದರು ಎನ್ನಲಾಗಿದೆ. ಈ ಪ್ಲಾಟ್‌ಗೆ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ನೋಟಿಸ್ ಬಂದಿತ್ತು.


‎‎ಈ ವಿಚಾರವಾಗಿ ಪ್ರಕಾಶ ದಾಸರೆಡ್ಡಿ ಹಾಗೂ ಮಿಥುನ ಜಾಧವ ಎಂಬವರು, ಎಲೈಟ್ ಡೆವಲಪರ್ಸ್ ಮತ್ತು ಬಿಲ್ಡರ್ಸ್ ವಿರುದ್ಧ ದೂರು ನೀಡುವಂತೆ ಒತ್ತಾಯಿಸಿ, ಪ್ಲಾಟ್‌ನ ದಾಖಲೆಗಳನ್ನು ಕೇಳಿದ್ದರು ಎನ್ನಲಾಗಿದೆ. ಆದರೆ ದಾಖಲೆ ನೀಡಲು ಮಹಮ್ಮದ್‌ಗೌಸ್ ನಿರಾಕರಿಸಿದ್ದರು ಎನ್ನಲಾಗಿದೆ.
‎
‎ಜುಲೈ 27, 2026ರಂದು ಬೆಳಿಗ್ಗೆ 10.30ರಿಂದ 10.45ರ ಸುಮಾರಿಗೆ ಮಹಮ್ಮದ್‌ಗೌಸ್ ತಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಹುಬ್ಬಳ್ಳಿಯ ಸೆಟ್ಲ್‌ಮೆಂಟ್‌ನ ಕುವೆಂಪು ವೃತ್ತದ ಬಳಿ ಕಾರಿನಲ್ಲಿ ಬಂದ ಆರೋಪಿಗಳು ಅವರ ವಾಹನವನ್ನು ತಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಪ್ರಕಾಶ ದಾಸರೆಡ್ಡಿ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ನೀಡಿ ಮೂರು ದಿನ ಕಳೆದರೂ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ತಗೊಳ್ತಾ ಇಲ್ಲ ಎಂದು ದೂರುದಾರ ಆರೋಪಿಸಿದ್ದಾನೆ
‎
‎
‎ಬೈಟ್: ಮಹಮ್ಮದ್‌ಗೌಸ್ – ದೂರುದಾರ

Tags:

error: Content is protected !!