ಸನ್ 2026-27ನೇ ವರ್ಷದ ಕಬ್ಬುನುರಿಸುವ ಹಂಗಾಮಿ ನಲ್ಲಿ ರೈತರಿಗೆ ಪ್ರತಿ ಟನ್ ಕಬ್ಬಿಗೆ 5000 ರೂಪಾಯಿ ದರ ನೀಡಬೇಕು. ಈ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಹಸಿರುಸೇನಾ ರೈತ ಸಂಘಟನೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ನಾಳೆ ಬುಧವಾರ ದಿನಾಂಕ 7 ರಂದು ಸಂಜೆ 5 ಗಂಟೆಗೆ ಕಾಗವಾಡದ ನಗರ ಪಂಚಾಯಿತಿ ಸಭಾಭವನದಲ್ಲಿ ಬಹಿರಂಗ ಸಭೆ ಜರಗಲಿದೆ. ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ, ಮಾಜಿ ಸಂಸದರು ಹಾಗೂ ಸ್ವಾಭಿಮಾನಿ ರೈತ ಸಂಘದ ಅಧ್ಯಕ್ಷ ರಾಜೀವ್ ಶೆಟ್ಟಿ ಇವರ ಮುಖ್ಯ ಉಪಸ್ಥಿತಿಯಲ್ಲಿ ರೈತರ ಸಮಾವೇಶ ಜರುಗಲಿದೆ.
ಸಭೆಯಲ್ಲಿ ರೈತರಿಗೆ ಹಸಿರು ಶಾಲು ಅರ್ಪಣೆ ಮಾಡಲಾಗುತ್ತದೆ. ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ಎಸ್ಎಂಪಿ ದರ ನಿಗದಿಪಡಿಸಿಲ್ಲ, ಇದರಿಂದ ರೈತರಿಗೆ ಒಂದು ರೀತಿ ಮೋಸವಾಗುತ್ತಿದೆ. ಇದನ್ನು ರೈತರಲ್ಲಿ ಜಾಗೃತಿ ಮೂಡಿಸಿ ಕೇಂದ್ರ ಸರ್ಕಾರಕ್ಕೆ ಎಸ್ಎಂಪಿ ದರ ನಿಗದಿಪಡಿಸಲು ಒತ್ತಾಯಿಸಲು ರೈತರ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಈ ಸಭೆಗೆ ಕಬ್ಬು ಬೆಳೆಗಾರ ರೈತರು ಪಾಲ್ಗೊಳ್ಳಬೇಕೆಂದು ಕಾಗವಾಡದ ರೈತ ಹೋರಾಟಗಾರ ಮಹಾದೇವ್ ಉದಗಾಂವೆ, ನ್ಯಾಯವಾದಿ ಕಾಕಾ ಪಾಟೀಲ್, ಅಜಿತ್ ಕರವ, ಸಿದ್ದು ಒಡೆಯರ್, ಪದ್ಮಾಕರ ಕರವ ಸೇರಿದಂತೆ ಅನೇಕ ರೈತ ಮುಖಂಡರು ಕರೆ ನೀಡಿದ್ದಾರೆ.
ಮಧ್ಯಾಹ್ನ ಉಗಾರದ ಫರಿದಖಾನವಾಡಿ ಗ್ರಾಮದಲ್ಲಿ ಇದೇ ಮುಖಂಡರಿಂದ ಬಹಿರಂಗ ಸಭೆ ಜರಗಲಿದೆ ಎಂದು ತಿಳಿಸಿದರು.
