ವಯಸ್ಸಾದ ತಂದೆಯನ್ನು ಮಕ್ಕಳು ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಲಕ್ಷ್ಮಣ ಲಕ್ಕಪ್ಪ ಮಾಂಗ (80) ಎಂಬ ವೃದ್ಧರು ತಮ್ಮ ಪುತ್ರರಾದ ವಿಠ್ಠಲ ಮಾಂಗ ಹಾಗೂ ಗುರುಪಾದ ಮಾಂಗ ವಿರುದ್ಧ ಹಲ್ಲೆ ಮತ್ತು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಮಕ್ಕಳು ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿ ಮನೆಯಿಂದ ಹೊರಹಾಕಿದ್ದಾರೆ ಎಂದು ವೃದ್ಧ ತಂದೆ ದೂರಿದ್ದಾರೆ.
ವಯಸ್ಸಾದ ಸಂದರ್ಭದಲ್ಲಿ ಮಕ್ಕಳ ಆಸರೆಯಿಲ್ಲದೆ ದಿಕ್ಕು ತೋಚದಂತಾದ ಲಕ್ಷ್ಮಣ ಮಾಂಗ ಅವರು ನ್ಯಾಯಕ್ಕಾಗಿ ಹಾರೂಗೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಆರೋಪಗಳ ಸತ್ಯಾಸತ್ಯತೆ ತಿಳಿದುಬರಬೇಕಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
