ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಂತೆ ಇಂದಿನ ಶಿಕ್ಷಣ ವ್ಯವಸ್ಥೆ ಮುನ್ನಡೆಯುತ್ತಿದೆ. ಮಹಿಳೆಯರ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅವರು ನೀಡಿದ ಪ್ರೇರಣೆ ಅಪಾರವಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.


ಶನಿವಾರ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಸಿದ್ದೇಶ್ವರ ಸಭಾಭವನದಲ್ಲಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಕಳೆದ ವರ್ಷ ಸೇವೆಯಿಂದ ನಿವೃತ್ತಿ ಹೊಂದಿದ 24 ಶಿಕ್ಷಕರು ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ 25 ಪ್ರೌಢಶಾಲೆಗಳ ಮುಖ್ಯಾಧ್ಯಾಪಕರನ್ನು ಅತಿಥಿಗಳ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲೆಯ ಆದರ್ಶ ಶಿಕ್ಷಕರಾಗಿ ಶಿರಗುಪ್ಪಿ ಕೆಪಿಎಸ್ ಶಾಲೆಯ ಶಿಕ್ಷಕ ಇಸ್ಮಾಯಿಲ್ ಬೇಗ, ಶ್ರೀಮತಿ ಎಸ್ ಬಿ ತಿಪ್ಪಿಮನಿ, ಶಿರಗುಪಿ ಗ್ರಾಮದ ಪ್ರೌಢಶಾಲೆಯ ಶಿಕ್ಷಕ ಬಿ.ಟಿ. ಕರಿಯನ್ನವರ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ತಹಸೀಲ್ದಾರ್ ರವೀಂದ್ರ ಹಾದಿಮನಿ, ಬಿಇಒ
ಚೆನ್ನಿಗರಾಮಯ್ಯ, ಐನಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಸುರೇಶ್ ಅಡಿಶೀರಿ, ಸಿಡಿಪಿಒ ಸಂಜುಕುಮಾರ್ ಸದಲಗೆ, ಬಿಆರ್‌ಸಿ ಪಿ.ಬಿ. ಮದಬಾವಿ, ಎಸ್.ಎಸ್. ನೂರಜೆ, ಎಂ.ವಿ. ನಾಮದಾರ್, ಐನಾಪುರ ಪಂಚಾಯಿತಿಯ ಸದಸ್ಯರಾದ ಪ್ರವೀಣ ಗಾಣಿಗೇರ್, ತಮ್ಮಣ್ಣ ಪಾರಶೆಟ್ಟಿ, ಸುರೇಶ್ ಅಡಿಸೇರಿ, ಮಹಾವೀರ ಪಾಟೀಲ್, ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಗಾಣಿಗೇರ್, ನೌಕರರ ಸಂಘದ ಅಧ್ಯಕ್ಷ ಎಸ್.ಎಸ್. ಭಾವಿ, ಎ.ಎಚ್. ಮಧಾಳೆ, ಎಲ್.ಕೆ. ಆರವಾಡೆ, ಜಿ.ಎಂ. ಸಡ್ಡಿ, ಎಂ.ಜಿ. ಸಂಕಪಾಳ, ಕೆ ಬಿ ರಾವುತ್ ಎಸ್.ಬಿ. ಕುಪವಾಡೆ, ಎ.ಎಸ್. ಪಾಟೀಲ್ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಭರತ್ ಬಿಲವಡೆ ಹಾಗೂ ಎಸ್.ಜೆ. ಚೌಗುಲಾ ನಿರೂಪಿಸಿದರು. ಶ್ರೀಶೈಲ ಮಾಳಿ ವಂದಿಸಿದರು.
