Kagawad

ಕಾಗವಾಡ ತಾಲೂಕು ಬರಪೀಡಿತ ಪ್ರದೇಶ ಘೋಷಣೆ: ಪಟಾಕಿ ಸಿಡಿಸಿ, ಸಿಹಿ ಹಂಚಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

Share

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ನೇತೃತ್ವದಲ್ಲಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗಿತ್ತು. ಇದನ್ನು ಗಮನಿಸಿದ ರಾಜ್ಯ ಸರ್ಕಾರವು ಕಾಗವಾಡವನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿತು.

ಈ ಹಿನ್ನೆಲೆಯಲ್ಲಿ ಗುರುವಾರ ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರ ಆಪ್ತ ಕಾರ್ಯಕರ್ತರಾದ ದಾದಾ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಅರುಣ್ ಗಣೇಶವಾಡಿ, ರಾಕೇಶ್ ಪಾಟೀಲ್, ನ್ಯಾಯವಾದಿ ಹಾಗೂ ಎಸ್.ಟಿ. ಸಮಾಜದ ಅಧ್ಯಕ್ಷ ಪ್ರವೀಣ್ ಕೆಂಪವಾಡೆ, ಸಚಿನ್ ಕವಟಿಗೆ, ಪ್ರಕಾಶ್ ಚೌಗುಲೆ, ಅನ್ನಾಸಾಹೇಬ್ ಡುಗುನವರ, ಸಂದೀಪ್ ಸಾಳುಂಕೆ ಮತ್ತು ಆಪ್ತ ಸಹಾಯಕ ವಿನಾಯಕ್ ಶಿಂದೆ ಸೇರಿದಂತೆ ಅನೇಕ ಕಾರ್ಯಕರ್ತರು ಒಂದುಗೂಡಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತೋಷವನ್ನು ಹಂಚಿಕೊಂಡರು. ನಂತರ ಕಾರ್ಯಕರ್ತರು ಹೆಸ್ಕಾಂ ಇಲಾಖೆಗೆ ಭೇಟಿ ನೀಡಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಲಿಖಿತ ರೂಪದಲ್ಲಿ ಪತ್ರ ಪಡೆದುಕೊಂಡರು.

Tags:

error: Content is protected !!