ಖಾನಾಪುರ ತಾಲ್ಲೂಕಿನಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಹೆಸ್ಕಾಂ ಲೈನ್ಸ್ಮನ್ಗಳ ಕೊರತೆಯನ್ನು ನೀಗಿಸಲು ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಯಶಸ್ವಿಯಾಗಿದ್ದಾರೆ. ನೌಕರರ ಮನವಿಗೆ ಸ್ಪಂದಿಸಿ ಅವರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ನಡೆಸಿದ ಒಂದೇ ಒಂದು ಫೋನ್ ಕರೆ ಫಲಪ್ರದವಾಗಿದ್ದು, ತಾಲ್ಲೂಕಿಗೆ ಒಟ್ಟು 45 ಜೂನಿಯರ್ ಪವರ್ಮನ್ಗಳು ಲಭ್ಯರಾಗಿದ್ದಾರೆ.

ಖಾನಾಪುರ ತಾಲ್ಲೂಕಿನಲ್ಲಿ ಲೈನ್ಸ್ಮನ್ಗಳ ತೀವ್ರ ಕೊರತೆಯಿದ್ದು, ಒಟ್ಟು ಹುದ್ದೆಗಳು ಖಾಲಿ ಇರುವ ಕುರಿತು ತಾಲ್ಲೂಕಿನ ಹೆಸ್ಕಾಂ ನೌಕರರು ರಾಯಗಡದಲ್ಲಿ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ನೌಕರರ ಈ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು, ತತಕ್ಷಣವೇ ಹೆಸ್ಕಾಂ ವ್ಯವಸ್ಥಾಪಕಿ ವೈಶಾಲಿ ಹಾಗೂ ಇಂಧನ ಸಚಿವರಿಗೆ ದೂರವಾಣಿ ಕರೆ ಮಾಡಿ ಖಾನಾಪುರ ತಾಲ್ಲೂಕಿನಲ್ಲಿ ಲೈನ್ಸ್ಮನ್ಗಳ ಕೊರತೆಯ ಗಂಭೀರತೆಯನ್ನು ವಿವರಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಇವರ ಈ ತುರ್ತು ಸ್ಪಂದನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಲಾಖೆಯು ಕೂಡಲೇ ಕ್ರಮ ಕೈಗೊಂಡು ಖಾನಾಪುರ ತಾಲ್ಲೂಕಿಗೆ ಒಟ್ಟು 45 ಜೂನಿಯರ್ ಪವರ್ಮನ್ಗಳನ್ನು ಮಂಜೂರು ಮಾಡಿದೆ. ಬರೇ ಒಂದೇ ಒಂದು ಕರೆಯ ಮೂಲಕ ತಾಲ್ಲೂಕಿನ ಹೆಸ್ಕಾಂ ನೌಕರರ ಬಹುದಿನಗಳ ಸಮಸ್ಯೆಯನ್ನು ಬಗೆಹರಿಸಿದ ಜನನಾಯಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರನ್ನು ಹೆಸ್ಕಾಂ ನೌಕರರು ಖಾನಾಪುರದಲ್ಲಿ ಭೇಟಿಯಾಗಿ ಅಭಿನಂದಿಸಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
