Vijaypura

ಶಿವ ಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥ ಪಠಣದ 50ನೇ ವರ್ಷದ ಸುವರ್ಣ ಮಹೋತ್ಸವ; ಸೆ. 6ರಿಂದ 13ರವರೆಗೆ ವಿಶೇಷ ಕಾರ್ಯಕ್ರಮ

Share

ಶ್ರೀ ಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥ ಪಠಣದ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನಗರದ ಶಿವ ಚಿದಂಬದ ದೇವಸ್ಥಾನದಲ್ಲಿ ಸೆಪ್ಟೆಂಬರ್‌ 6ರಿಂದ ಸೆ.13ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಚಿದಂಬರ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ ಹೇಳಿದರು.

ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ 6ಕೋಟಿ ಶಿವಚಿದಂಬರ ನಾಮಜಪ, ವಿವಿಧ ಹೋಮ-ಹವನಗಳನ್ನು, ಧಾರ್ಮಿಕ ಗೋಷ್ಠಿಗಳು, ಸಂಗೀತ ಕಾರ್ಯಕ್ರಮಗಳು, ಭಜನೆ. ಕೀರ್ತನ, ಸತ್ಪುರುಷರ ಪ್ರವಚನಗಳು ಸೇರಿದಂತೆ ಹಲವು ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸೆ.12ರಂದು ಶ್ರೀ ನಂಜನಗೂಡು ರಾಘವೇಂದ್ರಸ್ವಾಮಿ ಮಠದಿಂದ ಶ್ರೀ ಚಿದಂಬರ ದೇವಸ್ಥಾನದ ವರೆಗೆ ಭವ್ಯ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯದರ್ಶಿ ವೆಂಕಟೇಶ ಜೋಶಿ ನಂದವಾಡಗಿ ಮಾತನಾಡಿ, ಸೆ.6ರಿಂದ 13ರ ವರೆಗೆ ನಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಲೋಕ ಕಲ್ಯಾಣಾರ್ಥವಾಗಿ ಸತ್ಪುರುಷರ ಸ್ಮರಣೆ ಮಾಡಲಾಗುತ್ತಿದೆ. ಎಂಟು ದಿನಗಳ ಕಾರ್ಯಕ್ರಮಗಳಲ್ಲಿ ನಿತ್ಯವೂ ವಿವಿಧ ಮಠಗಳ ಗುರುಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸೆ.6ರಂದು ಗೋ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗಾಮನಗಟ್ಟಿಯ ಶ್ರೀ ಗುರು ಚಿದಂಬರ ದೀಕ್ಷಿತ ಗುರುಜಿ ಸಾನಿಧ್ಯ ವಹಿಸಲಿದ್ದಾರೆ. ಸೆ.7ರ ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಬಿ.ಪಾಟೀಲ ಹಾಗೂ ಶಾಸಕರಾದ ದಿನೇಶ ಗುಂಡೂರಾವ, ವಿಶ್ವಾಸ್‌ ವೈದ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸವದತ್ತಿಯ ಶ್ರೀ ದಂಡಪಾಣಿ ದೀಕ್ಷಿತ ಗುರುಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಸೆ.8ರ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಪಂ.ಮಧ್ವಾಚಾರ್ಯ ಮೋಕಾಶಿ, ಸಂಸದ ರಮೇಶ ಜಿಗಜಿಣಗಿ ಮುಖ್ತ ಅತಿಥಿಗಳಾಗಿ ಭಾಗವಹಿಸಲಿದ್ದು, ಕರ್ಕಿಹಳ್ಳಿಯ ಸುರೇಶ ಪಾಟೀಲ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಸೆ.9ರ ಕಾರ್ಯಕ್ರಮದಲ್ಲಿ ಶಾಸಕರಾದ ಸುನೀಲಗೌಡ ಪಾಟೀಲ, ವಿಠ್ಠಲ ಕಟಕದೊಂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಿಂದಗಿಯಶ್ರೀ ದತ್ತಪ್ಪಯ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ಧಾರೆ. ಸೆ.10ರ ಕಾರ್ಯಕ್ರಮದಲ್ಲಿ ಅದಮ್ಯ ಚೇತನದ ತೇಜಶ್ವಿನಿ ಅನಂತಕುಮಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಅಗಡಿಯ ಶ್ರೀ ಗುರುದತ್ತ ಚಕ್ರವರ್ತಿಗಳು ಸಾನಿಧ್ಯ ವಹಿಸಲಿದ್ದು, ಅಂದು ವಿಶೇಷವಾಗಿ ಮಹಿಳಾ ಗೋಷ್ಠಿ ಜರುಗಲಿದೆ. ಸೆ.11ರ ಕಾರ್ಯಕ್ರಮದಲ್ಲಿ ಶಾಸಕ ಶಿವಾನಂದ ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅಗಡಿಯ ಶ್ರೀ ವಿಶ್ವನಾಥ ಚಕ್ರವರ್ತಿ ಸಾನಿಧ್ಯ ವಹಿಸಲಿದ್ದಾರೆ. ಸೆ.12ರ ಕಾರ್ಯಕಮದಲ್ಲಿ ಶ್ರೀ ಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥ ಪಠಣದ 50ನೇ ವರ್ಷದ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕ ಬಿಗುಗಡೆಯಾಗಲಿದೆ. ಸೆ.13ರಂದು ಶ್ರೀ ಚಿದಂಬರ ಮಹಾಸ್ವಾಮಿಯ ಅಪ್ರಕಾಶಿತ ಲೀಲಾಗ್ರಂಥ ಪಠಣದ 50ನೇ ವರ್ಷದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ ಎಂದರು.

ಸದಸ್ಯ ರಾಘವೇಂದ್ರ ಜೋಶಿ ಮಾತನಾಡಿ, ಕಳೆದ 50 ವರ್ಷಗಳ ಹಿಂದೆ ಕೇವಲ 4 ಜನರಿಂದ ಆರಂಭವಾದ ಚಿದಂಬರ ಸೇವಾ ಸಮಿತಿ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಂಬಾದಾಸ ಜೋಶಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ವೇದಮೂರ್ತಿ ಶಂಕರಭಟ್ಟ ಅಗ್ನಿಹೋತ್ರಿ, ವಿ.ಸಿ.ಕುಲಕರ್ಣಿ, ಸಿ.ಕೆ.ಪಾಟೀಲ, ರಾಘವೇಂದ್ರ ಜೋಶಿ, ಸುಧೀಂದ್ರ ಜೋಶಿ, ವೆಂಕಟೇಶ ಜೋಶಿ, ವಿಜಯ ಜೋಶಿ, ಉಪೇಂದ್ರ ದೇಸಾಯಿ ಇದ್ದರು.

Tags:

error: Content is protected !!